Tuesday, October 17, 2017

ತುಡರ್ ಪರ್ಬ

ತುಡರ್ ದ ಬೊಲ್ಪುಡು ಬತ್ತ್ಂಡ್ ಪರ್ಬ... 
ದಡ ಬಡ ಪಟಾಕಿದ ತುಡರ್ ಪರ್ಬ... 

ಗೊಂಡೆ ಪೂತ ಸಿಂಗಾರ ಬೆಂದ್ ರ್ದ ಮಂಡೆಗ್   
ಪುಲ್ಯ ಕಾಂಡೆ ಎಣ್ಣೆ ಪೂಜಿದ್ ಮೀಪಿನ ಪರ್ಬ.... 
ಉರ್ದು ದೋಸೆದೊಟ್ಟಿಗೆ ಚೀಪಿದ ಬಜಿಲ್ ತಿನ್ನೊಂದು
ಪಟಾಕಿಗ್ ತೂ ಕೊರ್ದು ನಲಿಪುನ ಪರ್ಬ... 

ಭರವಸೆದ ತುಡರ್ ನ್ ಅರ್ಲಾದ್ 
ಉಡಲ್ ದ ಕುರೆನ್ ದೆಕ್ಕುನ ಪರ್ಬ .... 
ಅಜ್ಜೆರ್ ಪಿಜ್ಜೆರ್ ಜೋಕುಲು ಬಾಲೆಲು 
ಒಟ್ಟಿಗೆ ಸೇರ್ದ್ ಮಲ್ಪುನ ಗೌಜಿದ ಪರ್ಬ...  

ಗೂಡುದೀಪೋಡು ಮಿಣ್ಕುನ ಇಲ್ಲಡ್ 
ಬಿತ್ತ್ ಲ್ ನಿಲ್ಕೆ ದೀಪ ಅಲಾವುನ ಪರ್ಬ ... 
ಚೀಪಿದ ತೆನಸ್ ಪಟ್ಟೊಂದು ಜನಮಾನಿ 
ಗೋ ಅಪ್ಪೆನ್ ಪೂಜೆ ಮಲ್ಪುನ ಪರ್ಬ... 

ತುಡರ್ ದ ಬೊಲ್ಪುಡು ಬತ್ತ್ಂಡ್ ಪರ್ಬ... 
ದಡ ಬಡ ಪಟಾಕಿದ ತುಡರ್ ಪರ್ಬ... 

ರಚನೆ: ಶಶಿಕುಮಾರ್ ವಿ. ಕುಲಾಲ್

ಮಾತೆರೆಗ್ ಲಾ ತುಡರ್ ಪರ್ಬದ ಎಡ್ಡೆಪ್ಪುಲು..... 

Monday, March 24, 2014

Whatsapp

ಎಲ್ಲೆಲ್ಲೂ ಕೇಳುತಿದೆ mobileಗಳ ಆರ್ಭಟ
ಆವರಿಸಿದೆ ಅದರಲ್ಲಿ Whatsapp Facebook ಗಳ ಕೂಗಾಟ
Inland Post Card ಗಳು ಸೇರಿದವು ಮೋಲೆಗುಂಪಲ್ಲಿ 
ಪಟ್ಟಂತೆ ಹೊರಟಿದೆ massage ಗಳ ರಾಶಿ whatsapp ನಲ್ಲಿ

ಇಲ್ಲ ಸಮಯ ಸಿಕ್ಕರೆ ಮಾತನಾಡಲು ನಮ್ಮಲ್ಲಿ 
ಅಲ್ಲಿಯೂ ರಿಂಗಣಿಸುತ್ತದೆ whatsapp high volume ನಲ್ಲಿ 
ಹುಟ್ಟಿದರೂ whatsapp ಸತ್ತರೂ whatsapp
ಮದುವೆ ಮುಂಜಿಯ ಆಮಂತ್ರಣಕ್ಕೆ ಬೇಕೀಗ whatsapp

ಏನೆಂದು ಬಣ್ಣಿಸಲಿ ಸೃಷ್ಟಿಕರ್ತನ ಲೀಲೆ 
high tech ಯುಗದಲ್ಲಿ ನಮಗೆಲ್ಲಿದೆ ವೇಳೆ 
ಮುಂದೇನು ಬರುವುದೊ ಅರಿಯಲಾರೆ 
hats up to whatsapp ಅಷ್ಟೆ ಹೇಳಲಾರೆ 

ರಚನೆ: ಶಶಿಕುಮಾರ್ ವಿ. ಕುಲಾಲ್   

Wednesday, September 11, 2013

ನನ್ನ ಮನವು ಕೂಗಿದೆ

ನನ್ನ ಮನವು ಕೂಗಿದೆ
ನಿನ್ನಯ ಹೆಸರನು
ಕೇಳಲಾರೆಯಾ ಸಖಿ
ನನ್ನ ಪ್ರಾಣ ಸಖಿ

ನಿನ್ನೆಸರ ದ್ವನಿಯಲಿ ಏನಿದು ಇಂಚರ
ಪ್ರತಿದ್ವನಿಸಿದೆ ಕಿವಿಯಲಿ ಯಾಕೀತರ
ಉಸಿರುಸಿರಲಿ ಬೆರೆತ ನೀನೇ ಮಧುರ
ಸೇರಲು ನಿನ್ನನ್ನು ಯಾಕಿಂತ ಕಾತರ

ಬೆಳ್ಳಿ ಮೋಡದಿಂದ ಇಳಿದು ಬಂದವಳೆ
ದೇವಲೋಕದ ಅಪ್ಸರೆಯಂತವಳೆ
ಕನಸಿನ ರಾಣಿ ನೀನು ನನ್ನವಳೆ
ಅರ್ಧಾ ಂಗಿಯಾಗಿ ನನ್ನ ಬಾಳು ಬೆಳಗುವವಳೆ

ರಚನೆ: ಶಶಿಕುಮಾರ್ ವಿ. ಕುಲಾಲ್   

Tuesday, September 10, 2013

ಪ್ರೀತಿಯ ದೇವತೆ

ನನ್ನವಳು ನನ್ನವಳು ಪ್ರೀತಿಯ ದೇವತೆ ಅವಳು
ಹಗಲಿರುಳು ಕಾಡುವಳು ಕನಸಲ್ಲಿ ಬಂದು ಅವಳು
ಹೇಗೆ ಹೊಗಳಲಿ ಅವಳ ಅಂದವ ಅರಿಯೆನೆ
ಪದಗಳೇ ಸಾಲದೆ ಹೋಯಿತು ಏಕೆ ತಿಳಿಯೆನೆ

ನಿಂತಾಗ ನನ್ನೆದುರು
ಜಗವನ್ನು ನಾ ಮರೆತೆನೆ
ನಡೆಯುತಿರೆ ನೆನೆ ನೆನೆದು
ಕ್ರಮಿಸಿದ ದೂರವ ತಿಳಿಯದಾದೆನೆ

ಏನಾಗಿದೆ ಇಂದೆನಗೆ
ಮನಸ್ಯಾಕೆ ಮಂಕಾಗಿ ಹೋಯಿತೆ
ಯಾಕಾಗಿದೆ ಹೀಗೆನಗೆ
ಎದೆಬಡಿತ ಜೋರಾಗಿ ಹೋಯಿತೆ

ರಚನೆ: ಶಶಿಕುಮಾರ್ ವಿ. ಕುಲಾಲ್   

Wednesday, August 21, 2013

ಎಷ್ಟೊಂದು ಮಧುರ

ಎಷ್ಟೊಂದು ಮಧುರ ಈ ಪ್ರೀತಿಯ ಭಾವನೆಗಳು
ಕನಸುಗಳು ನನಸಾಗುವ ಆ ಸುಂದರ ಕ್ಷಣಗಳು
ನಯನಗಳಲಿ ಕಾತರತೆ ನಿನ್ನ ಕಾಣಲು
ನುಡಿಯಲ್ಲಿ ಹರಿದಿದೆ ಪ್ರೀತಿಯ ರಸಧಾರೆಗಳು

ಬದುಕು ಕಟ್ಟಲು ಸೇರುತಿದೆ ಎರಡು ಜೀವಗಳು
ಸಂಗೀತ ಲಹರಿಯಲಿ ಹಾರುತಿಹ ಜೋಡಿ ಹಕ್ಕಿಗಳು
ಮನಸ್ಸನ್ನು ಸೆಳೆವಂತ ನಿನ್ನ ಸುಂದರ ಕಣ್ಣುಗಳು
ಕೇಶವನ್ನು ನೇವರಿಸಲು ಮೂಡಿದೆ ಆತ್ಮೀಯ ಭಾವನೆಗಳು

ಒಂಟಿ ಜೀವಕೆ ನೀನಿತ್ತ ಆಸೆಯ ಚಿಗುರುಗಳು
ಬಾಳದಾರಿಯಲಿ ಪುಟಿದೆದ್ದ ಸುಂದರ ಬಯಕೆಗಳು
ಬಾ ಒಲವೆ ಬೇಗ ಇನ್ನೇಕೆ ನಿಂತಿರುವೆ
ಹೃದಯದಾ ಅರಮನೆಯ ಕದತೆರೆದು ಕಾದಿರುವೆ

ರಚನೆ: ಶಶಿಕುಮಾರ್ ವಿ. ಕುಲಾಲ್   

Tuesday, August 13, 2013

ಇರಲಾರೆ ನಾನು

ಇರಲಾರೆ ನಾನು ನಿನ್ನಿಂದ ದೂರ
ಮನದಲ್ಲಿ ಮೂಡಿದೆ ನೆನಪುಗಳ ಸಮರ
ಕ್ಷಣ ಕ್ಷಣವು ಕಂಡಿದೆ ನನಗೆ ವರುಷಗಳಂತೆ
ಬಯಕೆಗಳು ಮೂಡಿದೆ ಸಾಗರದ ಅಲೆಗಳಂತೆ

ಪ್ರತಿಯುಸಿರಿನಲ್ಲೂ ಬೆರೆತಿರುವೆ ನೀನು
ಹೃದಯಾಂತರಾಳದಿ ನೆಲೆಸಿರುವೆ ನೀನು
ಯಾವ ಜನ್ಮದ ಪುಣ್ಯವೊ ಅರಿಯದಾದೆ ನಾನು
ವಂದಿಪೆ ಆ ದೇವಗೆ ಮನಸಾರೆ ನಾನು

ಪ್ರೀತಿಯು ಏನೆಂಬುದ ಕಲಿಸಿದೆ ನೀನು
ಎಂದೆಂದು ಆಗಿರಲಿ ನಮ್ಮ ಬಾಳು ಹಾಲು ಜೇನು
ಮಮತೆಯ ಧಾರೆಯನು ಹರಿಸುತಿರು ಹೀಗೆ
ಪ್ರೀತಿಯ ಸುಧೆಯಲ್ಲಿ ತೇಲಿಸುವೆ ಪ್ರತಿಗಳಿಗೆ

ರಚನೆ: ಶಶಿಕುಮಾರ್ ವಿ. ಕುಲಾಲ್   

ಈ ಮನದಿ ನೀ ಬೆರೆತೆ

ಈ ಮನದಿ ನೀ ಬೆರೆತೆ
ನದಿಯೊಂದು ಸಾಗರವ ಸೇರಿದಂತೆ
ತುಂಬಿದೆ ಕನಸುಗಳಿಗೆ ಚೈತನ್ಯವ
ಆಗಸದಿ ಹಾರುವ ಹಕ್ಕಿಗಳಂತೆ

ಕಾತರದಿ ಕಾಯುತಿಹೆ ನಿನ್ನ ಸೇರಲು
ಬಾಳೆಂಬ ಸುಮಧುರ ಚಿತ್ರಣವ ಬಿಡಿಸಲು
ನನ್ನ ಲಹರಿಗೆ ನಿನ್ನ ಸ್ವರ ಬೆರೆಸಲು
ಪ್ರೀತಿಯ ದೇಗುಲದಿ ಜ್ಯೋತಿಯ ಬೆಳಗಿಸಲು

ನಾ ತಿಳಿಯದಾದೆ ಯಾಕಿಷ್ಟು ತುಡಿತ
ಮನ ಹುಚ್ಚಾಗಿ ಹಾರಿದೆ ಅದಕ್ಕಿಲ್ಲ ಹಿಡಿತ
ಮಾಡಿದೆ ನೀನು ಏನೊಂದು ಮೋಡಿ
ನಾವಾಗುವ ಬಾಳಲ್ಲಿ ಜನುಮದಾ ಜೋಡಿ

ರಚನೆ: ಶಶಿಕುಮಾರ್ ವಿ. ಕುಲಾಲ್