Friday, June 28, 2013

ಕಾದಿರುವೆ ಸೇರಲು

ಚಿಗುರಿದೆ ನಿನ್ನಯ ಮನದಲಿ
ನನಗಾಗಿ ಪ್ರೀತಿಯ ಭಾವನೆ
ಅರಳಿದೆ ನಿನ್ನಯ ಕಂಗಳಲಿ
ನನಗಾಗಿ ಜೀವನದ ಪರಿವರ್ತನೆ

ನನ್ನಲ್ಲಿ ಮಾತನಾಡಲು ನಿನಗೆಷ್ಟು ಆತುರ
ನಿನ್ನನ್ನು ನೋಡಲು ನನಗೆಷ್ಟು ಕಾತರ
ಮನಸ್ಸುಗಳ ಮಿಲನ
ಬೆರೆತಾಗ ಉಸಿರುಸಿರು
ಸ್ವರ್ಗದಾ ಸುಖವನ್ನು ನಾ ಕಂಡೆನೆ
ನಿನ್ನಯ ಸ್ಪರ್ಶದಿ ನಾ ಮಿಂದೆನೆ

ನಮ್ಮ ಸ್ನೇಹ ಜೇನಂತೆ ಮಧುರ
ನಮ್ಮ ಪ್ರೀತಿ ಬೆಳದಿಂಗಳಂತೆ ಸುಂದರ
ಒಲವಿನ ಸುಮವು
ಅರಳಲು ಘಮ ಘಮವು
ತುಂಬಿದೆ ಬಾಳಲ್ಲಿ ಹರುಷವ ನೀನು
ಕಾದಿರುವೆ ಸೇರಲು ನಿನ್ನಲ್ಲಿ ನಾನು

ರಚನೆ: ಶಶಿಕುಮಾರ್ ವಿ. ಕುಲಾಲ್ 

Thursday, June 27, 2013

ಓ ಎನ್ನ ಬಂಗಾರ

ಆ ಸೂರ್ಯೆ ಬನ್ನಗ
ನಿನ್ನ ಮೋನೆ ಕೆಂಪಾಂಡ್
ಎನ್ನ ನೆಂಪು ಮೂಡ್ನಗ
ಮನಸ್ ನಿನ್ನ ಮರ್ಲಾಂಡ್

ಪುಲ್ಯ ಕಾಂಡೆ ಬೊಲ್ಪುದ
ಮೋಕೆ ದಿಂಜಿ ಪಾತೆರ
ನಿಕ್ಕಾತ್ರ ಕಾತ್ ದ್ ಉಂತುದೆ
ಓ ಎನ್ನ ಬಂಗಾರ
ಓ ಎನ್ನ ಬಂಗಾರ

ಮನಸ್ ದ ಆಸೆ
ಈ  ಪನ್ಲ ಎಂಡ ಒರಾ
ಮಲ್ಪುವೆ ಪೂರ
ಆಸೆನ್ ಸಾರ

ಉಡಲ್ ಡೆ ಬರೆಯೆ
ಯಾನ್ ಮೋಕೆದ ಅಕ್ಷರ
ನಿನ್ನ ಪುದರ್ ಅಚ್ಚಾಂಡ್
ಓ ಎನ್ನ ಬಂಗಾರ
ಓ ಎನ್ನ ಬಂಗಾರ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಚಿಮ್ಮಿತು ಪ್ರೀತಿಯ ಚಿಲುಮೆ

ಚಿಮ್ಮಿತು ಪ್ರೀತಿಯ ಚಿಲುಮೆ ಕಂಡಾಗ ನಿನ್ನನು
ತುಟಿಯಲ್ಲಿ ನಿನ್ನ ಅಂದು ಕಂಡಾಗ ನಗುವನು
ಎಷ್ಟೊಂದು ಮಧುರ ಕಳೆದೊಂದು ದಿನವದು
ಕಂಗಳ ನೋಟ ಬೆರೆತಂತ ಕ್ಷಣವದು

ಪ್ರೀತಿಯ ಗುಲಾಬಿ ಕೊಟ್ಟಾಗ ನಿನ್ನ ಕೈಗೆ
ನಾಚಿ ನೀರಾದೆ ಕೆಂಪುಗೆನ್ನೆಯ ಸೊಬಗೆ
ನನ್ನ ಕೈಯಲ್ಲಿ ನೀ ಕೈ ಜೋಡಿಸಿದಾಗ
ಜೋಡಿ ಹಕ್ಕಿಗಳಂತೆ ಮನ ಹಾರಿತಾಗ

ಹೀರಿದಾಗ ಜೊತೆಯಾಗಿ ಹಣ್ಣಿನ ರಸವನು
ಕರಗಳಲಿ ರೋಮವು ಜುಮ್ಮೆಂದ ಕ್ಷಣವನು
ಮರೆಯಲಾರೆ ಎಂದಿಗೂ ಮೊದಲ ಭೇಟಿಯನು
ಕಳೆಯೋಣ ಪ್ರತಿಕ್ಷಣ ಸವಿಯುತ್ತಾ ಬಾಳರಸವನು

ರಚನೆ: ಶಶಿಕುಮಾರ್ ವಿ. ಕುಲಾಲ್ 

Wednesday, June 26, 2013

ಹಾಡೋಣ ಬಾ ಗೆಳತಿ

ಹಾಡೋಣ ಬಾ ಗೆಳತಿ ಪ್ರಣಯರಾಗ
ಕುಣಿಯೋಣ ಹೃದಯದೊಡತಿ ಸೇರಿ ಈಗ
ಪ್ರೀತಿಯ ಮತ್ತನ್ನು ಉಣಿಸಿದೆ ನೀನು
ಒಲವೆ ನೀನು ಬಾರೆ..... ಚೆಲುವೆ ನೀನು ಬಾರೆ

ಬಾಳ ಸರಿಗಮದಿ ನೀ ರಾಗವಾದೆ
ನನ್ನ ಉಸಿರ ಉಸಿರಲ್ಲಿ ನೀ ಐಕ್ಯವಾದೆ
ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ ನಿನ್ನ
ಪ್ರೀತಿ ನೀನು ಬಾರೆ ....... ಮನಸ ನೀಡು ಬಾರೆ

ಬೆಳದಿಂಗಳಾಗಿ ನೀ ತೋರಿದೆ ಬೆಳಕ
ನೀ ಸನಿಹ ಬರುತಿರಲು ಮೈಯೆಲ್ಲ ಪುಳಕ
ಬಾಳೋಣ ಜೊತೆಯಾಗಿ ನಾವು
ಕನಸ ನೀಡು ಬಾರೆ ..... ನನಸ ಮಾಡೋಣ ಬಾರೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಏನಾಗಿದಿಂದು ಎನಗೆ

ಏನಾಗಿದಿಂದು ಎನಗೆ ಈ ಕಂಪನ
ತವಕವು ಸೇರಲು ನನ್ನ ಮನಸಿನ
ಪ್ರೀತಿಯ ಭಾಷೆಯಲಿ ಏನೆನ್ನಲಿ
ಮೈಜುಮ್ಮೆನ್ನಲು ನಿನ್ನ ಮಾತಿನಲಿ

ನಿನ್ನ ಸ್ವರವ ಕೇಳುತಿರೆ ಚೈತನ್ಯ ಹುಟ್ಟಿದೆ
ಮನವೆಂಬ ಹಕ್ಕಿ ಆಕಾಶದಿ ಹಾರಿದೆ
ತುಂಬಿದೆ ಉಲ್ಲಾಸ ನನ್ನ ಬಾಳಿನಲ್ಲಿ
ಚಡಪಡಿಸಿದೆ ಈ ಒಡಲು ಸೇರಲು ನಿನ್ನಲ್ಲಿ

ಪ್ರೀತಿಯ ನಗುವನ್ನು ಕೇಳುತಿರೆ ಆನಂದ
ನಿನಗಾಗಿ ತೆರೆದಿಡುವೆ ಕದವನ್ನು ಹೃದಯದ
ನದಿಯೊಂದು ಹರಿಯುತ್ತಾ ಸೇರಿದಂತೆ ಸಾಗರವ
ಒಲವಿಂದ ಬಂದು ಸೇರು ನನ್ನ ಜೀವನವ

ರಚನೆ: ಶಶಿಕುಮಾರ್ ವಿ. ಕುಲಾಲ್ 

Tuesday, June 25, 2013

ನೋಡುತಿರೆ ನಿನ್ನ ನಡುವ

ನೋಡುತಿರೆ ನಿನ್ನ ನಡುವ ಬಳುಕುವ ಬಳ್ಳಿಯಂತೆ
ನಡೆಯುತಿರೆ ಮೆಲ್ಲನೆ ಅಪ್ಸರೆಯ ನಾಟ್ಯದಂತೆ
ಸವರಿದಾಗ ಅದರಲಿ ಸುತ್ತಲು ಬೆರಳನು
ನಾಚಿ ನೀರಾಗಿ ಅಪ್ಪಿದೆ ನನ್ನನು

ಹರಿಯುತಿಹ ನದಿಯಂತೆ ಬಳುಕುತಿಹ ನಿನ್ನ ನಡುವು
ನವಿಲಿನ ನಾಟ್ಯದಂತೆ ಕುಣಿವಾಗ ನಿನ್ನ ನಡುವು
ಮರುಳಾದೆನೆ ನಿನ್ನ ತಿರುಗುವ ನಡುವಿನ ಬಿನ್ನಾನಕೆ
ಬಾ ಸನಿಹಕೆ ನಿನ್ನ ಕೊಂಡೊಯ್ಯುವೆ ಸ್ವರ್ಗದ ಲೋಕಕೆ

ಮರುಳಾಗದವರಿಲ್ಲ ಹೆಣ್ಣಿನ ಸೊಂಟಕೆ
ಸೆಳೆಯಿತಲ್ಲೆ ನನ್ನ ಮನ ನಿನ್ನ ಸಣ್ಣ ಸೊಂಟಕೆ
ಹಿಡಿದು ಬರಸೆಳೆಯಲು ನಿನ್ನ ಹಿಡಿದು
ವ್ಯಕ್ತ ಪಡಿಸಲಾಗದ ಸಂತಸ ಕಂಡೆನಿಂದು

ರಚನೆ: ಶಶಿಕುಮಾರ್ ವಿ. ಕುಲಾಲ್ 

Monday, June 24, 2013

ಜಾರಿ ಬಿದ್ದೆನು

ಜಾರಿ ಬಿದ್ದೆನು ನಿನ್ನ ಕಣ್ಣ ನೋಡುತಾ
ಮರಳಿ ಎದ್ದೆನು ನಿನ್ನ ಬಾಹು ಹಿಡಿಯುತಾ
ಮನಸೂರೆಗೊಳ್ಳುವ ನೋಟ ನಿನ್ನ ಕಣ್ಣಲಿ
ಮದವೇರಿ ನಾ ಬಿದ್ದೆ ಅದರ ನಶೆಯಲಿ

ಅಪ್ಪಿಕೊಂಡೆಯಾ ನನ್ನ ಪ್ರೀತಿಯಿಂದಲೆ
ನಿನ್ನವನಾದೆ ನಾ ಆ ಕ್ಷಣದಿಂದಲೆ
ನಾಚಿ ಮುದುಡಿದೆ ನೀ ನನ್ನ ತೋಳತಕ್ಕೆಯಲಿ
ಪ್ರೀತಿ ಪುಟಿಯಿತು ನಿನ್ನ ಎದೆಯಾಳದಲಿ

ಉಸಿರು ಬೆರೆತ ಆ ಕ್ಷಣವನು
ಮನಸೆರಡು ಸೇರಿದ ಆ ದಿನವನು
ಮರೆಯಲಾರೆನು ಎಂದಿಗೂ
ಇರಲಿ ನಮ್ಮ ಈ ಬಂಧ ಎಂದೆಂದಿಗೂ

ರಚನೆ: ಶಶಿಕುಮಾರ್ ವಿ. ಕುಲಾಲ್ 

Saturday, June 22, 2013

ನೀ ನಗಲು ಹೂನಗೆ

ನೀ ನಗಲು ಹೂನಗೆ ನನ್ನ ಮನವು ಕುಣಿದಿದೆ
ಕಣ್ಣಿನ ಸನ್ನೆಗೆ ಹೊಸ ಆಸೆ ಮೂಡಿದೆ
ಪ್ರೀತಿಯ ಮಾತಲಿ ನಾ ಮರೆತೆ ನನ್ನನು
ಏನೊಂದು ಮಾಯೆಯೊ ಕಂಡಾಗ ನಿನ್ನನು

ಕೈಬಳೆ ನಾದಕೆ ಸೋತೆನೇ ನಾನು
ಬಳುಕುವ ಬಳ್ಳಿಯ ಲತೆಯಂತೆ ನೀನು
ನಿನ್ನ ಸ್ಪರ್ಶಕೆ ಮೈಮರೆತೆ ನಾನು
ನೀಲವೇಣಿ ನಿನ್ನ ತುಟಿಯ ರಸದಲ್ಲಿ ಜೇನು

ನಡೆದಾಗ ಗೆಜ್ಜೆಯ ಸ್ವರವೇ ಸಂಗೀತವಾಯಿತೆ
ನುಡಿದಾಗ ನಿನ್ನ ವಾಣಿ ಲಹರಿಯಂತಾಯಿತೆ
ರಂಬೆಯೆ ನಾಚುವ ಮೈಮಾಟ ನಿನ್ನಲಿ
ಎಂದೆಂದೂ ನಾವು ಒಂದೇ ನೂರಾರು ಜನ್ಮ ಬರಲಿ

ರಚನೆ: ಶಶಿಕುಮಾರ್ ವಿ. ಕುಲಾಲ್ 

Friday, June 21, 2013

ನೀ ಸೇರು ನನ್ನಲೆ

ನಿನ್ನ ಮನಸ್ಸಲ್ಲಿ ತುಂಬಿದೆ ನನಗಾಗಿ ಪ್ರೀತಿ
ತೋರ್ಪಡಿಸಲಾರೆಯಾ ಯಾಕಿಷ್ಟು ಭೀತಿ
ನಿನ್ನ ವಾಣಿಯಲಿ ನಾ ಕಂಡೆ ಒಲವು
ನಿನ್ನ ಕಂಗಳಲಿ ನನಗಾಗಿ ಕಾತರವು

ಕಾಯುತಿರುವೆ ನನ್ನ ಒಂದು ನೋಟಕೆ
ಹಂಬಲಿಸುತಿರುವೆ ನನ್ನ ಒಡನಾಟಕೆ
ಮನಸಿನ ಭಾವನೆಯ ಯಾಕೆ ಮುಚ್ಚಿಡುವೆ
ಮೀರಿದರೆ ಕಾಲ ವ್ಯರ್ಥ ದುಃಖ ಪಡುವೆ

ಬಂಧು ಮಿತ್ರರು ಜೊತೆಗೂಡಿ ಬರುವರೇನು
ನೀ ನೊಂದು ನಿಂತಾಗ ಸಂತೈಸುವರೇನು
ಬರುವಾಗ ಬೆತ್ತಲೆ ಹೋಗುವಾಗ ಕತ್ತಲೆ
ಬಂದು ಹೋಗುವ ನಡುವೆ ನೀ ಸೇರು ನನ್ನಲೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

Thursday, June 20, 2013

ಮಳೆ ಬಂದು ನಿಂತಾಗ

ಮಳೆ ಬಂದು ನಿಂತಾಗ
ಉರಿಬಿಸಿಲು ಮೂಡಿದಾಗ
ಅದ ಬೇಗೆ ಸಹಿಸಲು ಸಾದ್ಯವೇನು 
ನೀ ಪ್ರೀತಿಯ ಸಿಂಚನವಿತ್ತು
ನನ್ನ ಮನವ ಅರಿಯದೆ ಹೊರಟಾಗ
ಅದ ಬೇನೆ ಸಹಿಸಲು ಸಾದ್ಯವೇನು 

ಹುಟ್ಟಿದ ಪ್ರೀತಿಯ ನೀ ಅರಿಯದಾದೆ
ಮನಸಿನ ಭಾವನೆಗೆ ನೀ ಸ್ಪಂದಿಸದಾದೆ
ನಿನ್ನ ಮೋಹಿಸಿ ನಾನು ಮರುಳಾದೆ
ಪೋಣಿಸಿದ ಹೂ ಮಾಲೆ ತುಂಡರಿಸಿ ಹೋದೆ

ನಾ ಕಂಡ ಕನಸಿಗೆ ತಣ್ಣೀರೆರೆಚಿ ನೀ ಹೋದೆ
ಉಕ್ಕಿ ಬರುವ ಕಣ್ಣೀರ ನೀ ಕಾಣದಾದೆ
ನೆನಪಿನ ಮಳೆಯಲ್ಲಿ ನಾ ಬಾಳಲಾರೆನು
ನನ್ನುಸಿರು ನಿಂತಾಗ ನೀ ಬರುವೆಯೇನು

ರಚನೆ: ಶಶಿಕುಮಾರ್ ವಿ. ಕುಲಾಲ್ 

ಏಕಾಂಗಿ ನಾನಾದೆನೆ

ಹಚ್ಚನೆ ಹಸಿರಲಿ ಮೈದುಂಬಿ
ನಲಿಯುವ ಮರದ
ಒಣಗಿ ನಿಂತ ರೆಂಬೆ ನಾನಾದೆನೆ
ವಿಧಿಯೇ .... ಏಕಾಂಗಿ ನಾನಾದೆನೆ

ಮಾಡಿದ ಕಾರ್ಯದಿ ಜಯವೆ ಇಲ್ಲ
ನಡೆವ ಹಾದಿಲಿ ಮುಳ್ಳೇ ಎಲ್ಲ
ಯಾವ ಜನ್ಮದ ಕರ್ಮವೊ
ತಿಳಿಯದಾದೆನೆ ..... ಏಕಾಂಗಿ ನಾನಾದೆನೆ

ಬಣ್ಣವಿಲ್ಲದ ಈ ಬದುಕು
ಖಾಲಿ ಹಾಳೆಯ ಈ ತುಣುಕು
ಬರೆದ ಲೇಖನ ಮಾಸಿಹೋಯಿತೆ
ಯಾಕೆ ತಿಳಿಯದಾದೆನೆ ..... ಏಕಾಂಗಿ ನಾನಾದೆನೆ

ಬತ್ತಿ ಹೋದ ಕೆರೆಯಂತಾಯಿತೆ
ನಂದಿ ಹೋದ ದೀಪದಂತಾಯಿತೆ
ಪಟ್ಟ ಪ್ರಯತ್ನ ಫಲಿಸದೆ ಹೋಯಿತೆ
ಯಾಕೆ ತಿಳಿಯದಾದೆನೆ ..... ಏಕಾಂಗಿ ನಾನಾದೆನೆ

ರಚನೆ: ಶಶಿಕುಮಾರ್ ವಿ. ಕುಲಾಲ್   

Wednesday, June 19, 2013

ಭಾವನೆಗಳ ಭೋರ್ಗರೆತ

ಭಾವನೆಗಳ ಭೋರ್ಗರೆತ
ಹೃದಯವೆಂಬ ಸಾಗರದಿ
ಅಪ್ಪಳಿಸಿದೆ ಅಲೆಗಳಾಗಿ
ಪ್ರೀತಿಯೆಂಬ ಕಾವ್ಯದಿ

ಚಿಗುರುತಿದೆ ಬಯಕೆಗಳು
ಸೇರಿ ಬಾಳಲು ನಿನ್ನೊಡನೆ
ಜೀವನವೆಂಬ ರಥದಲ್ಲಿ
ನಾನು ನೀನು ಗಾಲಿಗಳಾಗಿ

ಕಣ್ಣೋಟದಿ ಸೃಷ್ಟಿಸಿದೆ
ಎದೆಗೂಡಲಿ ವೃಂದಾವನ
ಭಾವ ತರಂಗಗಳು ಶೃತಿಲಯದಿ
ಹಾಡಾಗಿ ಚಿಮ್ಮಿದೆ ಪ್ರೇಮರಾಗದಿ

ಜೋಡಿಸಿದೆ ಕಾವ್ಯ ಬಿಂದುಗಳನ್ನು
ನಿನಗಾಗಿ ಬರೆದೆ ಕವಿತೆಗಳಾಗಿ
ಧುಮ್ಮಿಕ್ಕುವ ಪ್ರೀತಿ ಜಲಪಾತದಿಂದ
ನಿನಗಾಗಿ ಹರಿದಿದೆ ಪ್ರೇಮಸುಧೆಯಾಗಿ

ರಚನೆ: ಶಶಿಕುಮಾರ್ ವಿ. ಕುಲಾಲ್   

ನಮ್ಮ ಪ್ರೀತಿ

ಎರಡು ಮನಸುಗಳ ಬೆಸುಗೆ
ಕಣ್ಣುಗಳೆರಡರ ಸ್ಪಂದನ ಪ್ರೀತಿ
ಮೊದಲ ನೋಟದಿ ಚಿಗುರಿದರೂ
ಸಾವೆಂಬುದಿಲ್ಲದ ನಮ್ಮ ಪ್ರೀತಿ

ಬಣ್ಣಗಾರ ನಾನಾಗುವೆ
ನಿನ್ನ ಕನಸುಗಳ ಗೋಪುರದ
ಚೆಲ್ಲಿ ರಂಗನು ಬೆಳದಿಂಗಳ
ಜೀವ ಕಳೆಯ ತುಂಬುವೆ

ಪುಷ್ಪದಂತೆ ನೋಡುವೆ
ಹೃದಯ ಬಸಿದು ಬೊಗಸೆ ತುಂಬ
ಪ್ರೀತಿ ತುಂಬಿ
ನಿನ್ನ ಪೋಷಿಸುವೆ

ಎದೆಗೂಡಿನ ಸಿಂಹಾಸನದಿ
ರಾಣಿಯಂತೆ ಕೂರಿಸುವೆ
ಹಾಡಿ ಜೋಗುಳ ಮಲಗಿಸಿ ನಿನ್ನ
ಮಗುವಿನಂತೆ ಮುದ್ದಿಸುವೆ

ರಚನೆ: ಶಶಿಕುಮಾರ್ ವಿ. ಕುಲಾಲ್   

Tuesday, June 18, 2013

ಹೋಗಬೇಡವೆ ಒಂಟಿಯಾಗಿಸಿ

ಹೋಗಬೇಡವೆ ಗೆಳತಿ ಒಂಟಿಯಾಗಿಸಿ
ಬದುಕಲಾರೆ ನಿನ್ನ ಬಿಟ್ಟು ಓ ಪ್ರೇಯಸಿ
ನೋವಿನಲ್ಲೂ ನಗಿಸಿ ನನ್ನ ಪ್ರೀತಿಸಿದೆ
ನಾ ಬರೆದ ಕವಿತೆಯ ಲಹರಿ ನೀನಾದೆ

ಕತ್ತಲಲ್ಲಿ ಹುಡುಕುತಿರಲು ಸಂತೈಸುವ ಕೈಗಳನ್ನು
ಮಿಂಚಾಗಿ ನೀನು ಬಂದು ಆಲಂಗಿಸಿದೆ ನನ್ನನ್ನು
ನಿಂತು ಹೋದ ಈ ಹೃದಯಕೆ ಬಡಿತ ನೀನಾದೆ
ಕರಗಿ ಹೋದ ಭಾವಗಳಿಗೆ ಜೀವ ತುಂಬಿದೆ

ಯಾವ ಜನ್ಮದ ಬಂಧನವೊ ಅರಿಯದಾದೆನೆ
ನಿನ್ನ ಉಸಿರಲಿ ನಾ ಉಸಿರಾಗಿ ಬೆರೆತು ಹೋದೆನೆ
ನಿನ್ನ ಬಿಟ್ಟು ಒಂದು ಕ್ಷಣವೂ ಹೇಗೆ ಇರಲಿ
ಹರಿಯದಿರು ನೀರಾಗಿ ನನ್ನ ಕಣ್ಣಲ್ಲಿ

ರಚನೆ: ಶಶಿಕುಮಾರ್ ವಿ. ಕುಲಾಲ್   

Monday, June 17, 2013

ನೀನು ನನ್ನವಳೆಂಬ ಭಾವನೆ

ಸೆರೆಯಾದೆನಲ್ಲೆ ನಿನ್ನ ಮೋಹದ ಕಾರಾಗೃಹದಲಿ
ಬಂದಿಯಾದೆನಲ್ಲೆ ನಿನ್ನ ಬೆಚ್ಚನೆ ಅಪ್ಪುಗೆಯಲಿ
ಮರೆತೆನಲ್ಲೆ ನಿನ್ನ ಪ್ರೀತಿಯ ಆಸರೆಯಲಿ
ಹಾಡಿತಲ್ಲೆ ಮನವು ಮಮತೆಯ ರಾಗದಲಿ

ಏನೊಂದು ನಶೆಯೊ ಕಂಡಾಗ ನಿನ್ನ ಕಣ್ಣಲಿ
ಉದಯಿಸಿದೆ ಆಸೆ ಬಂದಾಗ ನನ್ನ ಬಾಳಲಿ
ನಸುನಗುತ ನೀನಿರೆ ಈ ಲೋಕವೆ ಸ್ವರ್ಗವೊ
ಅಳಬೇಡ ಎಂದೆಂದೂ ಆ ದಿನದಿ ನನ್ನ ಅಂತ್ಯವೊ

ಕಾಡುತಿದೆ ನನಗೆ ನಿನ್ನ ಯೋಚನೆ
ಬಡಿದಿದೆ ಹೃದಯ ನೆನೆದಾಗ ನಿನ್ನನೆ
ಮನದಿ ಹುಟ್ಟಿದೆ ಹುಚ್ಚು ಚಿಂತನೆ
ನೀನು ನನ್ನವಳು ಎಂಬ ಭಾವನೆ

ರಚನೆ: ಶಶಿಕುಮಾರ್ ವಿ. ಕುಲಾಲ್   

ನಾ ಹೇಗೆ ತಿಳಿಯಲಿ

ಹನಿ ಹನಿ ಮಳೆ ಹನಿ
ಉದುರಿದೆ ಆಗಸದಿಂದ
ಹನಿ ಹನಿ ನೀರ ಹನಿ
ಮೂಡಿದೆ ಕಣ್ಣಿನಿಂದ

ಕಾಣದು ಗೆಳತಿ ಈ ಕಣ್ಣೀರು
ಬೆರೆಯಿತು ಮಳೆ ನೀರಲಿ
ವೇದನೆ ಎದೆಯ ನೀ ಅರಿಯದಾದೆ
ಅಳುತಿಹೆ ವಿರಹದ ಬೇಗೆಯಲಿ

ಯಾರಿಗೆ ಹೇಳಲಿ ನನ್ನಯ ಪಾಡು
ಹೃದಯವೆ ನಿಂತಿತಲ್ಲೆ
ನಿನ್ನಯ ನೆನಪಲಿ ನನ್ನ ಮರೆತೆ
ಉಸಿರಲೆ ಬೆರೆತೆಯಲ್ಲೆ

ನಯನದಿ ನಿದಿರೆಯ ಕದ್ದೆಯಲ್ಲೆ
ನಾ ಹೇಗೆ ಕಾಣಲಿ ಕನಸಾ
ಹೃದಯವ ತಟ್ಟಿ ಹೋದೆಯಲ್ಲೆ
ನಾ ಹೇಗೆ ತಿಳಿಯಲಿ ನಿನ್ನ ಮನಸಾ

ರಚನೆ: ಶಶಿಕುಮಾರ್ ವಿ. ಕುಲಾಲ್   

Thursday, June 13, 2013

ಹೊಸ ಉಸಿರು

ಸುಮವೇನು ನೀನು ನನ್ನ ಬಯಕೆ ಬಳ್ಳಿಯ
ಚಿತ್ತಾರವೇನು ನೀನು ನನ್ನ ಕನಸ ನೆಲೆಯ
ಮೂಡಿದೆ ಬಿಂಬ ನನ್ನ ಹೃದಯ ಗೂಡಲ್ಲಿ
ಕೂಗಿದೆ ಉಸಿರು ನಿನ್ನ ಪ್ರೀತಿ ಹೆಸರಲಿ

ಒಲವೆ ನಿನ್ನ ಕಂಡಾಗ ಯಾಕಿಂತ ಹಂಬಲ
ನಿನ್ನ ಕಣ್ಣ ನೋಟದಿ ಮನಸಾಯಿತು ಮರುಳ
ನನ್ನ ಬಾಳ ಚುಕ್ಕಿಗೆ ರಂಗು ತುಂಬಿ
ಹಾಕು ನೀ ರಂಗೋಲಿ
ವರ್ಣವಿಲ್ಲದ ಈ ಬಾಳಿಗೆ ರಂಗು ಚೆಲ್ಲಿ
ಆಡು ನೀ ಬಣ್ಣದ ಹೋಳಿ

ಬದುಕುವ ಆಸೆ ಹುಟ್ಟಿಸಿದೆ ಮನದಲಿ
ಶೃಂಗಾರ ಕಾವ್ಯ ನನ್ನ ಬಾಳ ಕವಿತೆಯಲಿ
ಬತ್ತಿ ಹೋದ ನಯನಗಳಿಗೆ
ನೀ ತುಂಬು ಪ್ರೀತಿಯ ಪನ್ನೀರು
ಬಾಡಿ ಹೋದ ಬಳ್ಳಿಗೆ ನೀರೆರೆದು
ನೀ ಕೊಡು ಹೊಸ ಉಸಿರು

ರಚನೆ: ಶಶಿಕುಮಾರ್ ವಿ. ಕುಲಾಲ್   

Wednesday, June 12, 2013

ಧರೆಯು ಕುಣಿದಿದೆ

ಧರೆಯು ಕುಣಿದಿದೆ
ಹಚ್ಚನೆ ಹಸಿರಲಿ
ವರುಣನ ಜೊತೆಯಲಿ
ಮುತ್ತಿನ ಹನಿಯಲಿ
ಶೃತಿಲಯವ ಬೆರೆತು ನಲಿದಿದೆ

ನದಿಯ ಜುಳುಜುಳು
ನಾದದ ಜೊತೆಗೆ
ಕಡಲ ಅಬ್ಬರದ
ತೆರೆಗಳ ಜೊತೆಗೆ
ಹಾಡುವ ಚಿಲಿಪಿಲಿ
ಹಕ್ಕಿಗಳ ಕಲರವದ ಜೊತೆಗೆ
ಧರೆಯು ಕುಣಿದಿದೆ

ಬೀಸುವ ತಂಪಾದ
ಗಾಳಿಯ ಜೊತೆಗೆ
ಚಿಗುರುವ ಮರಗಳ
ಮೊಗ್ಗಿನ ಜೊತೆಗೆ
ಅರಳುವ ಸುಮಗಳ
ಪರಿಮಳದ ಜೊತೆಗೆ
ಧರೆಯು ಕುಣಿದಿದೆ

ಮಿಂಚಿನ ಜಗಮಗ
ಬೆಳಕಿನ ಜೊತೆಗೆ
ಕಾಮನ ಬಿಲ್ಲಿನ
ರಂಗಿನ ಜೊತೆಗೆ
ಸುರಿಯುವ ಮಳೆನೀರ
ತಂಪಿನ ಜೊತೆಗೆ
ಧರೆಯು ಕುಣಿದಿದೆ

ರಚನೆ: ಶಶಿಕುಮಾರ್ ವಿ. ಕುಲಾಲ್   

Monday, June 10, 2013

ನೂರಾಸೆ ಮನದಲ್ಲಿ

ನೂರಾಸೆ ಮನದಲ್ಲಿ ಚೆಲುವೆ ನಿನ್ನ ಕಂಡಾಗ
ಶಿಲೆಯಂತೆ ಎದೆಯಲ್ಲಿ ನೀ ಬಂದು ನಿಂತಾಗ
ನಿಲ್ಲುವೆ ನಾ ಜಗಮೆಟ್ಟಿ ನೀ ಬಂದರೆ ಜೊತೆಯಾಗಿ
ನೀಡುವೆ ಹೃದಯವ ಪ್ರೀತಿಯ ಉಡುಗೊರೆಯಾಗಿ

ನೀ ಬಂದೆ ಬಾಳಲ್ಲಿ ಸುಖದ ಮಧುವನ್ನು ಕೂಡಿ
ಲತೆಯಂತೆ ಬಳುಕುತ್ತಾ ನೀ ಮಾಡಿದೆ ಮೋಡಿ
ದೂರಾಗದಿರು ನನ್ನಿಂದ ಬಾಳೋಣ ಕೂಡಿ
ಹೊಸಬೆಳಕು ಮೂಡುತಿದೆ ನಿನ್ನನ್ನು ನೋಡಿ

ನಾನಿರುವೆ ನೆರಳಾಗಿ ಉರಿಬಿಸಿಲಿನಲ್ಲಿ
ನಾನಿರುವೆ ಆಸರೆಯಾಗಿ ಜಡಿಮಳೆಯಲ್ಲಿ
ಪೋಷಿಸುವೆ ನಿನ್ನನ್ನು ಪ್ರೇಮ ಶರದಿಯಲ್ಲಿ
ಸಾಗುವ ಜೊತೆಯಾಗಿ ಬಾಳರಥದಲ್ಲಿ

ರಚನೆ: ಶಶಿಕುಮಾರ್ ವಿ. ಕುಲಾಲ್   

Friday, June 7, 2013

ನೆನಪು

ಸುರಿವ ಮಳೆಹನಿಯಲಿ ನಿನ್ನದೆ ನೆನಪು
ನಿನ್ನ ಪ್ರೀತಿಯಲಿ ಕಳೆದ ಆ ನೆನಪು

ನಿನ್ನ ನೋಟದಿ ಅದೇನೋ ಮಿಂಚು
ಸನಿಹ ಬಂದು
ತೋಳಲ್ಲಿ ಸೆಳೆದ ನೆನಪು

ಹರಿಯಲು ಉಕ್ಕಿ ಪ್ರೀತಿ ಮನದಲಿ
ಗುಲಾಬಿ ಕೆನ್ನೆಗೆ
ನೀಡಿದ ಚುಂಬನದ ನೆನಪು

ಜಗವ ಮರೆತು ನಾವು ಬೆರೆತಾಗ
ನೀನು ನುಡಿದ
ಮಮತೆಯ ಮಾತುಗಳ ನೆನಪು

ತುಂಬಿದೆ ಉಲ್ಲಾಸ ಹೊಸ ಬಯಕೆ
ನನ್ನ ಬದುಕಲಿ
ನೀ ತೋರಿದ ಹೊಸಲೋಕದಾ ನೆನಪು

ಕೈಯ ಹಿಡಿದು ಹೆಜ್ಜೆ ಜೊತೆಯಾಗಿ
ನಾವು ನಡೆದಾಗ
ಅನುರಾಗದ ಆನಂದದ ನೆನಪು

ಬೀಸಲು ತಂಗಾಳಿ ನನ್ನ ನೀನು
ತಬ್ಬಿ ಹಿಡಿದಾಗ
ಉಸಿರು ಬಿಸಿಯಾದ ನೆನಪು

ಕೆಂದುಟಿಯಲಿ ನಗೆಯೊಂದು ಚೆಲ್ಲಿ
ಕಿವಿಯಲಿ ಪಿಸುರಿದ
ಮುತ್ತಿನ ನುಡಿಗಳ ನೆನಪು

ರಚನೆ: ಶಶಿಕುಮಾರ್ ವಿ. ಕುಲಾಲ್   

Thursday, June 6, 2013

ನಗುತಿರೆ (haste raho)

ನಗುತಿರೆ ನಗುತಿರೆ ನಗುತಿರೆ
ನೀ ಬಾಳಲ್ಲಿ ಸದಾ

ನೀ ನಗಲು ಕೆನ್ನೆ ಗುಳಿಯು
ಎಷ್ಟು ಅಂದವೇ
ನಾನು ಮರೆತೆನು ಜಗವನು
ಅಂತ ಚಂದವೇ

ಹೊಳೆದಿದೆ ಮಿಂಚಿನಾ ಹೊಳಪೆ
ನಿನ್ನ ದಂತಗಳಲಿ
ಅರಳಿತು ಹೂಬನ ನಗಲು ನೀ
ಕಂಗಳ ಕಾಂತಿಯಲಿ

ನಿನ್ನ ನುಡಿಯಲಿ ಉದುರಿದೆ
ಮುತ್ತುಗಳ ಮಳೆಯೋ
ಕಿಲಕಿಲನೆ ನೀ ನಗಲು
ಚೆಲ್ಲಿದೆ ಮಲ್ಲಿಗೆಯೋ

ರಚನೆ: ಶಶಿಕುಮಾರ್ ವಿ. ಕುಲಾಲ್   

haste raho haste raho haste raho 
har pal jeevan me

tum hase to gaal 
kitna khoob ho
bhul gaya me jag ko
kitna khoob ho

chamakte bijili ke jaise
tere daanth ho
kilgaye phool bagiche me
tere ankhon ke roshni me

tera baton se gire
motiyonka barsaat ho
tere muskurahat pe
gire gajre bi

Written by: Shashikumar V. Kulal

Wednesday, June 5, 2013

ಪ್ರೀತಿಯೆಂಬ ಬೆಂಕಿಯಲಿ (pyaar ke aag me)

ಏಕೆ ನನ್ನ ಸುಡುವೆ ಪ್ರೀತಿಯೆಂಬ ಬೆಂಕಿಯಲಿ
ಏಕೆ ನನ್ನ ಕಾಡುವೆ ಕನಸೆಂಬ ಭ್ರಮೆಯಲಿ
ಹೇಳಲಾರೆಯ ನೀನು
ಮನಸ್ಸೇ ಮನಸ್ಸೇ ಮನಸ್ಸೇ
ಮನಸ್ಸೇ ಮನಸ್ಸೇ ಮನಸ್ಸೇ

ಆ ಸೂರ್ಯಚಂದ್ರನಾಣೆ ನಾ ನಿನ್ನ ಪ್ರೀತಿಸಿದೆ
ತಾರೆಗಳ ಲೋಕದಲಿ ಈ ಶಶಿಯು ಕಾಣದೆ
ಸುಮವಾಗಿ ನೀನು ಪ್ರೀತಿಯ ಮಕರಂದ ತೋರಿದೆ
ದುಂಬಿಯಾಗಿ ನಾ ಬರಲು ನೀ ಮುದುಡಿ ಹೋದೆ

ನೀ ಬಂದೆ ಉಸಿರಾಗಿ ಚೈತನ್ಯ ತುಂಬಿದೆ
ಈ ದೇಹ ನಿರ್ಜೀವ ನೀ ನನ್ನ ತೊರೆದರೆ
ಹೃದಯದಿ ಹೊಕ್ಕಿ ನೀ ವೀಣೆ ಮಿಡಿದೆ
ಎದೆ ಸ್ತಬ್ದವಾಗುವುದು ಸ್ವರ ಕೇಳದಾದರೆ

ರಚನೆ: ಶಶಿಕುಮಾರ್ ವಿ. ಕುಲಾಲ್    

(Hindi Translation)
kyu jala rahe ho pyaar ke aag me
kyu satha rahe ho spno ke aaD me
bolona tum 
mere mann mere mann mere mann 
mere mann mere mann mere mann 

uss chand suraj ke kasam maine tumko pyaar kiya
sitaron ke mehefil me iss chaand dikha nahi kya
phool banke tumne pyar ke parag dikha diya 
bhramar banke paas aya to tum kaha chup liya

tum aye sanso me utsah bardiya
tum chale gaye to sanse band ho jaye ga
mann me bas ke tumne veena baja diya 
hruday tam jayega jab raag suna na diya 

Written by: Shashikumar V. Kulal

Tuesday, June 4, 2013

ತುಂತುರು ಮಳೆಹನಿಯಲಿ (rim jim barsaat me)

ತುಂತುರು ಮಳೆ ಹನಿಯಲಿ                        
ನಾನು ನೀನು ಜೊತೆಯಲಿ                        
ಸೇರಿ ನಡೆಯಲು ಸಾಗರ ಕಿನಾರೆಯಲಿ          
ಸುಮಧುರ ಸಂಜೆಯ ಹೊತ್ತಿನಲಿ                  

ಬೆಸೆಯಿತು ಭಾಂಧವ್ಯ ಮಾತಿನಲಿ              
ಮೇಘಗಳ ಮಿಲನದ ಜೊತೆಯಲಿ                
ಮೂಡಿತು ಕನಸುಗಳು ಕಂಗಳಲಿ                
ಮಿಂಚಿನ ಫಲಫಲಿಸುವ ಪ್ರಕಾಶದಲಿ            

ಒಂದಾಯಿತು ಹೃದಯಗಳು ಪ್ರೀತಿಯಲಿ              
ಹಾಡಿತು ಪ್ರೇಮರಾಗ ಮನಸಿನಲಿ                    
ಪುಟಿಯಿತು ಆಸೆಗಳು ಅಲೆಗಳ ಜೊತೆಯಲಿ        
ಬೆರೆಯಿತು ಮನಗಳು ಭವಿಷ್ಯದ ಯೋಜನೆಯಲಿ  

ರಚನೆ: ಶಶಿಕುಮಾರ್ ವಿ. ಕುಲಾಲ್                   

(Hindi Translation)
rim jim barsaat me
hum tum saath me
saath chale saagar kinaare me
khoobsurath shaam ke samay me

juDjaye rishta baatho me
baadal ke milan ke saath me
chagaye sapne aankhon me
bijli ke chamakte ujale me

ek huve do dil pyaar me
jab gaaye pyaar ke geeth dil me
utgaye aashaye leheronke saath me
juDgaye dil bhavisya ke yojana me

Written by: Shashikumar V. Kulal

Monday, June 3, 2013

ಏನೆಂದು ಹೊಗಳಲಿ (kaise gungaan karu tera)

ರವಿವರ್ಮ ಬರೆದ ಒಂದು ಸುಂದರ ಚಿತ್ರಣವೇ ನೀ
ಕಾಳಿದಾಸ ಕಲ್ಪನೆಯ ಶಕುಂತಲಳ ಪ್ರತಿಬಿಂಬವೇ ನೀ
ಜಕಣಾಚಾರಿ ಕೆತ್ತಿದ ಅಪರೂಪ ಶಿಲ್ಪವೇ ನೀ
ಏನೆಂದು ಹೊಗಳಲಿ ಹೆಣ್ಣೆ ನಿನ್ನ ಅಂದವ
ಚೆಲುವೆ ನಿನ್ನ ಅಂದವ

ಚಂದಿರನ ಬೆಳಕಂತೆ ಹೊಳೆಯುತಿರ ನಿನ ಮೊಗವೆ
ಕಂಗಳ ಕಾಂತಿಯಿಂದ ಬೆಳಗಿತೆ ಈ ಜಗವೆ
ಮೇನಕೆಯು ನಾಚುವಂತ ಬಳುಕುತಿಹ ನಿನ ನಡುವು
ಇಟ್ಟಾಗ ಹೆಜ್ಜೆ ನೀನು ಅರಳಿತು ಹೂದೋಟದ ಹೂವು

ಹರಿಯುತಿರ ಝರಿಗಳಲಿ ನಿನ್ನ ಹೆಸರೆ ಕೇಳಿತೆ
ತಂಪಾದ ತಂಗಾಳಿಯು ನಿನ್ನನೆ ಕೂಗಿತೆ
ನೀ ಸನಿಹ ಬರುತಿರೆ ನನ್ನ ನಾ ಮೌನಿಯಾದನೆ
ನಿನ್ನ ಅಂದ ಸವಿಯುತ ನಾ ಪ್ರೇಮ ಸಾಗರದಿ ತೇಲಿದೆನೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

(Hindi Translation)
ravivarma likha ek sundar art ho tum
kaalidaas ke soch ke shakuntala ke humsakal ho tum
jakanaachari banaya beheterin shilp ho tum
kaise tere khoobsurati ka gungaan karu.. ladki
kaise tere husn ko

chand ke roshnisa khilta tera chehera
aankhonka roshni se iss darti huve ujale 
menka bhi sharmaye aisa tera kamariya
tum jab chalte ho to bhagiche ke phool bhi kilgaye 

behete nadiyon me tera hi naam sun raha he
tandi hawaye bhi tuje pukharrahe he
tum paas aaye mera to me chup hogaya
tera khoobsurati se me pyaar ke saagar me kho gaya

Written by: Shashikumar V. Kulal

ನುಡಿಸುತಿರುವೆ ವೀಣೆ ಏನು (baja raheho kya veena)

ನುಡಿಸುತಿರುವೆ ವೀಣೆ ಏನು
ನನ್ನಯ ಎದೆಯೊಳಗೆ
ತುಂಬಿದೆ ಪರಿಮಳ ಏನು
ನನ್ನಯ ಉಸಿರೊಳಗೆ

ಕಣ್ಣು ಮುಚ್ಚಿ ನೆನೆಯಲು ನಿನ್ನ ಆಲಿಸಿದೆ ಇಂಚರವ
ಬಿಸಿಯುಸಿರಲಿ ನೀ ತುಂಬಿದೆ ಮಲ್ಲಿಗೆ ಪರಿಮಳವ
ನನ್ನೊಲವೆ ಬರೆದೆ ನೀನು ಕವಿತೆಯೊಂದು ಎದೆಯೊಳಗೆ
ಹುಟ್ಟಿಸಿದೆ ಬಯಕೆ ನೀನು ಬದುಕಿನ ಕತೆಯೊಳಗೆ

ಚಿನ್ನ ನಿನ್ನ ಕಣ್ಣಂಚಿನಲಿ ಮಿಂಚೊಂದು ಹೊಳೆದಿದೆ
ಕಣ್ಣೋಟ ನಮ್ಮ ಬೆರೆಯಲು ಪ್ರೀತಿ ಉಕ್ಕಿ ಹರಿದಿದೆ
ವರವಾಯಿತೆ ನಿನ್ನ ನಗುವು ಸೇರಲು ಕಾತರಿಸಿದೆ
ಕೈ ಹಿಡಿದು ಜೊತೆ ಹಾಡಿ ಕುಣಿಯಲು ಮನಸಾಗಿದೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

(Hindi Translation)
baja raheho kya veena
mere dil me
bardiya kya kushboo
mere saason me

ankhen band karo to sun raha tera gaana
saans levo to mehesus kiya tera kushboo
mera pyaar tumne likh diya kavitaaye mere dil me
jagadiya sapne mere jeevan ke kahani me

priye tere ankhon me halkasa bijli dikh gaya
ankhen hamari juDgaye to pyaar jag gaya 
haseto tum icchaa puri hogaya milne taras gaya
haath pakaDke saath gaane ko jee chahata hai

Written by: Shashikumar V. Kulal

ಅಳಬೇಡವೆ ಗೆಳತಿ (mat rona dost )

ಅಳಬೇಡವೆ ಗೆಳತಿ ಅಳಬೇಡವೆ
ನನಗಾಗಿ ನೀನು ಅಳಬೇಡವೆ
ಆ ಬ್ರಹ್ಮ ನಮ್ಮನು ಒಂದಾಗಿಸಿಲ್ಲ
ಯಾಕಾಯ್ತು ಹೀಗೆಂದು ಅಳಬೇಡವೆ

ನನ್ನ ಮನ ಅತ್ತು ಕರೆದು ಬಡವಾಗಿದೆ
ನಿನ್ನ ನಾ ಹೇಗೆ ಸಂತೈಸಲಿ
ಅಳಬೇಡವೆ ಗೆಳತಿ ಅಳಬೇಡವೆ
ನನಗಾಗಿ ನೀನು ಅಳಬೇಡವೆ

ಯಾವ ಜನ್ಮದ ಬಂಧನವೊ ನಿನ್ನ ಕಂಡೆನು
ಪ್ರೀತಿ ಉಕ್ಕಿ ಬರಲು ನಿನ್ನ ಸೇರದಾದೆನು
ಯಾಕಾಗಿ ಈ ಶಿಕ್ಷೆ ನಾನು ಅರಿಯೆನು
ಮರುಜನ್ಮ ಇದ್ದರೆ ನಿನ್ನ ನಾ ಸೇರುವೆನು

ಮನಸು ನನ್ನ ನಿನಗಾಗಿ ತುಡಿಯುತಿದೆ
ಕಣ್ಣು ನಿನ್ನ ನೋಡಲು ಕನಸು ಕಂಡಿದೆ
ನಿನ್ನ ಕಂಗಳಲಿ ಹರಿವ ನೀರು ನಾನಾದೆನೆ
ನನ್ನ ದೇಹದಿ ಉಸಿರಲ್ಲಿ ನಿನ್ನ ಕಂಡೆನೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

(Hindi Translation)
mat rona dost mat rona
mereliya tum mat rona
us brahm ne hame saath nahi kiya
kishliye soch ke mat rona

mera dil ro ro ke tamgaya
tuje me kaise samjavu
mat rona dost mat rona
mereliya tum mat rona

kiss janam ka bandan hai nahi me janta
pyaar dil me jaga to me tuje mil nahi paya
kisliye ye shiksha me nahi janta
dusra janm ho to tuje me juDunga

dil tuje milne taras raha he
ankhen tuje dekhne sapna dekha he
tere ankhon se beheta paani me hu
mere jaan ke chale saanso me tuje paa liya

Written by: Shashikumar V. Kulal

Sunday, June 2, 2013

ನಿನ್ನಯ ಒಲುಮೆಗೆ (tumari pyaar me)

ನಿನ್ನಯ ಒಲುಮೆಗೆ ಪ್ರೀತಿಯ ಚಿಲುಮೆಗೆ
ಯಾಕೆ ವಶವಾದೆ
ಮನಸ್ಸು ಮನಸ್ಸು ಬೆರೆತು ಸೇರಲು
ಜಗವ ಮರೆತೋದೆ

ಈ ದೇಹ ನಶ್ವರ ಪ್ರೀತಿ ಶಾಶ್ವತ
ಈ ದೇಹ ನಶ್ವರ ಪ್ರೀತಿ ಶಾಶ್ವತ
ಎಂದೆಂದೂ ಹೀಗೆ ನಲಿವ ನಾವು
ಗೆಳತಿ ಬಾರೆಯಾ

ಯಾರ ಹೆಸರಲಿ ಯಾರ ಹೆಸರನು
ವಿಧಿಯೇ ಬರೆದನು
ನಿನ್ನ ಹೆಸರಲಿ ನನ್ನ ಹೆಸರನು
ಅವನೇ ಬರೆದನೊ

ಹೃದಯದೇಗುಲ ದಲ್ಲಿ ನೆಲೆಸಿ
ಪ್ರೀತಿಸೆ ನನ್ನನು
ನಮ್ಮ ಬಂಧನ ಬ್ರಹ್ಮ ಬರೆದ
ನಂಟು ಸೇರೆನ್ನನು

ರಚನೆ: ಶಶಿಕುಮಾರ್ ವಿ. ಕುಲಾಲ್ 

(Hindi Translation)
tumari pyaar me pyaar ke chahat me
kyu me kho gaya
do dil mil gaye to 
iss jag ko bhul gaya

badan kshanik hai pyaar shashwat hai
badan kshanik hai pyaar shashwat hai
aisa he hamesa rahenge hum dono 
dost avona

kiska naam pe kiska naam
vidhata ne likh diya
tere naam pe mera naam 
uss ne hi likha hai

dil ke mandir me reheke tum
muje pyaar karo
hamare bandan brahm rachita
rishta aa mil jaaye

Written by: Shashikumar V. Kulal

ಹಗಲು ಗನಸಾಯಿತೆ (din ka sapna hogaya )

ಹಗಲು ಗನಸಾಯಿತೆ ಜೀವನ
           ಬತ್ತಿದ ಕೆರೆಯಾಯಿತೆ
ಹಾದಿ ಮುಳ್ಳಾಯಿತೆ ನಡೆವ
            ಕಣ್ಣು ಮಂಜಾಯಿತೆ

ಒಪ್ಪದಿ ನೈದ ಮಲ್ಲಿಗೆ ಮಾಲೆ ತುಂಡಾಗಿ ಚದುರಿತೆ
ಬಾಳಲಿ ಕಟ್ಟಿದ ಸುಂದರ ಕನಸು ನುಚ್ಚು ನೂರಾಯಿತೆ
ಜೀವನ ಎನ್ನ ಲಗಾಮಿಲ್ಲದ ಕುದುರೆಯಂತಾಯಿತೆ
ಅಂದಕಾರದಿ ಮುಳುಗಿ ಜೀವನ ನರಕವಾಯಿತೆ

ಮನದ ಆಸೆಗಳೆಲ್ಲ ನದಿ ನೀರಲ್ಲಿ ತೇಲಿ ಹೋಯಿತೆ
ಯಾಕಾಗಿ ಈ ಬದುಕು ಭುವಿಯೊಳಗೆ ಸೇರಬಾರದೆ
ಹಗಲು ಗನಸಾಯಿತೆ ಜೀವನ ಬತ್ತಿದ ಕೆರೆಯಾಯಿತೆ
ಹಾದಿ ಮುಳ್ಳಾಯಿತೆ ನಡೆವ ಕಣ್ಣು ಮಂಜಾಯಿತೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

(Hindi Translation)
din ka sapna hogaya jeevan
sukha sarovar hogaya
rasta kanto se bhar gaya chalne ka
aankhe mand hogaya

pyaar se banda pushpmaala tutke gir gaya
jeevan me banda hasin sapne sab tut gaya
jeevan mera bina lagam ka ghoda jaise ho gaya
kali jindagi me jeevan narak ho gaya

dil ka sapne nadi pani me beh gaya
kyu ye jindagi maut kyu nahi aa gaya
din ka sapna hogaya jeevan sukha sarovar hogaya
rasta kanto se bhar gaya chalne ka aankhe mand hogaya

Written by: Shashikumar V. Kulal

Saturday, June 1, 2013

ಮುಂಗುರುಳು

ಜೀಕುತಿರುವ ನಿನ್ನ ಮುಂಗುರುಳು
ಕೆನ್ನೆ ಸವರಿ ನಿಂತಿದೆ
ಬೆರಳಾಡಿಸಿದಾಗ ನೀ ಅದರಲಿ
ನಾಚಿ ಮೇಲೆ ಪುಟಿದಿದೆ

ತಿರುಹಿದಷ್ಟು ನೀ ಅದನು
ಮತ್ತೆ ಮತ್ತೆ ಛೇಡಿಸಿದೆ
ತಂಗಾಳಿಯಲಿ ಉಯ್ಯಾಲೆಯಾಡಿ
ನಿನ್ನ ಕಂಗಳ ಚುಂಬಿಸಿದೆ

ಬೆರಳು ನಡುವ ಸವರಿದಂತೆ
ನಿನ್ನ ಗಲ್ಲವ ಸವರಿದೆ
ಉಸುರುವಾಗ ಎದೆಯುಬ್ಬಿಸಿ
ಚಂಗನೆ ಹಾರಿ ಕುಣಿದಿದೆ

ಅರ್ಧ ಮುಚ್ಚಿ ನಿನ್ನ ಕಣ್ಣನು
ಕಣ್ಣು ಮುಚ್ಚಾಲೆ ಆಡಿದೆ
ಬೆಳ್ಳಿ ಉಂಗುರದಂತೆ ಮೇಲೆ ಕೆಳಗೆ
ಜಾರುವಾಟ ಆಡಿದೆ

ನಿನ್ನ ನಡುವಿನಂತೆ ಅದು
ಅತ್ತ ಇತ್ತ ಬಳುಕುತಿದೆ
ಭ್ರಮರದಂತೆ ಹಾರಿ ಹಾರಿ
ಹಾಲುಗೆನ್ನೆಯ ಮುತ್ತಿಕ್ಕಿದೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ನಿನ್ನ ಮುತ್ತಿನಂತ ನುಡಿಯಲಿ

ನಿನ್ನ ಮುತ್ತಿನಂತ ನುಡಿಯಲಿ ಸ್ವರ್ಗ ಕಂಡೆನೆ
ನಿನ್ನ ಮಾತು ಕವಿತೆಯಾಗಿ ಹರಿದು ಬಂದವೆ
ಕಾಮನ ಬಿಲ್ಲಿನ ಅಂದ ಮೊಗದಿ  ಕಂಡೆನೆ
ಕಾಮದೇವನ ಕಣೆಯ ಹರಿತ ಕಣ್ಣೋಟದಿ ಕಂಡೆನೆ

ಚೆಲ್ಲುವೆ ಸೊಗಸನು ನೀ ನಡೆದಾಗ
ಗೆಜ್ಜೆಯ ನಾದದ ಸುಮಧುರ ರಾಗ
ಚೈತ್ರದ ಕೋಗಿಲೆ ಹಾಡಿದ ಹಾಗೆ
ನೀ ನಗಲು ನನಗೆ ಎನಿಸಿತು ಹಾಗೆ

ಗಾಳಿಯು ಬೀಸಲು ಕೇಶ ಹಾರಿದೆ
ಮುಂಗುರುಳ ಹಿಡಿದು ಗಾಳಿ ಓಡಿದೆ
ನಿನ್ನ ಕೇಶರಾಶಿಗೆ ಮರುಳಾದೆನೆ
ಕೆಂದುಟಿಯ ಚೆಲುವಿಗೆ ಬೆರಗಾದೆನೆ

ಹಾಡಿದೆ ಸುವ್ವಾಲೆ ನನ್ನ ಮನದೊಳಗೆ
ಸೇರುವ ಆಸೆ ನಿನ್ನ ಉಸಿರೊಳಗೆ
ಮಾತುಗಳು ಮನಸಿನ ಹಾಡಿಹೊಗಳಲು
ನೀ ಬಾರೆ ನನ್ನ ಸನಿಹ ಸೇರಿ ಬಾಳಲು

ರಚನೆ: ಶಶಿಕುಮಾರ್ ವಿ. ಕುಲಾಲ್ 

ಜಾರಿದೆ ಕಂಬನಿ

ಜಾರಿದೆ ಕಂಬನಿ ನಿನ್ನ ನೆನಪಲಿ
ನೀನೆ ತುಂಬಿರುವೆ ನನ್ನ ಉಸಿರಲಿ
ವಿರಹ ವೇದನೆ ನಾನು ತಾಳಲಾರೆನೆ
ಈ ನೋವನು ನಾನು ಸಹಿಸದಾದೆನೆ

ಹೃದಯಬಡಿತ ನಿಂತಂತೆ ಬಾಸವಾಯಿತೆ
ಬದುಕಿನ ದಾರಿ ಕಾಣದಾಯಿತೆ
ಕಣ್ಣುಗಳು ನಿನ್ನರಸಿ ಸ್ತಬ್ದವಾಯಿತೆ
ಮನಸಿನ ಕೂಗು ಕೇಳದಾಯಿತೆ

ಉರಿಬಿಸಿಲ ಬೇಗೆಯಲಿ ಬೆಂದು ಹೋದೆನೆ
ನಿನ್ನ ಕಾಣದಾಗಿ ಸೋತು ಹೋದೆನೆ
ಒಂಟಿಯಾಗಿ ನನ್ನ ಬಿಟ್ಟು ಎಲ್ಲಿ ಹೋದೆಯಾ
ನೀನಿರದೆ ಈ ಬಾಳು ಯಾಕೆ ಹೇಳೆಯಾ

ರಚನೆ: ಶಶಿಕುಮಾರ್ ವಿ. ಕುಲಾಲ್