Friday, May 31, 2013

ಕಮಲನಯನೆ

ಏನು ಅಂದವೆ ಗೆಳತಿ ನಿನ್ನ ಕಂಗಳು
ಸಿಲುಕಿದೆ ನಿನ್ನ ನೋಟದ ಸುಳಿಯೊಳಗೆ
ಏನು ಅಂದವೆ ಗೆಳತಿ ನಿನ್ನ ಕಂಗಳು
ಸಿಲುಕಿದೆ ನಿನ್ನ ನೋಟದ ಸುಳಿಯೊಳಗೆ

ಮೋಹಿಸೆ ಬಾರೆ ಕಮಲನಯನೆ
ಪ್ರೀತಿಸೆ ಬಾರೆ ಮಂದಗಮನೆ
ಆ ಸೂರ್ಯ ನಿನ್ನ ನೋಟಕೆ ನಾಚಿ ನಿಂತನೆ
ನೋಡುತ ನಿಂತೆ ನಿನ್ನ ನನ್ನ ಮರೆತೆನೆ

ಕಣ್ಣ ರೆಪ್ಪೆ ಎಷ್ಟು ಚಂದ ನವಿಲ ಗರಿಗಳು
ಓರೆ ನೋಟ ಬೀರಿ ನೀನು ನನ್ನ ನೋಡಲು
ಮಿತ್ರೆ ನಿನ್ನ ನೋಡುತಿರೆ ಮನಸು ಸೋತವೆ
ಚಂದಿರನ ಮೊಗದ ಮೇಲೆ ಎರಡು ಪದ್ಮವೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಪ್ರೀತಿಯ ನಂದನದ

ಪ್ರೀತಿಯ ನಂದನದ ಹೂವಾಗಿ ಬಾರೆ
ಸಂಗೀತ ಸುಧೆಯಲಿ ಮೀಯೋಣ ಬಾರೆ
ಮೋಹದ ಸಿಂಚನ ಸವಿಯೋಣ ಬಾರೆ
ಸ್ವರ್ಗದ ಲೋಕದ ಅಪ್ಸರೆ ಬಾರೆ

ಹಾಡೋಣ ಪ್ರೇಮರಾಗ ಜೊತೆಯಾಗಿ
ಕನಸಿನ ಸೌಧದಿ ಬೆರೆತ್ಹೋಗಿ
ತುಂಬೋಣ ಬಾಳಿಗೆ ಮಧುವನ್ನು
ಸೇರುವ ಜೇನಿನ ಕಡಲನ್ನು

ಹವಳದ ತುಟಿಯನು ಹೀರುವೆ
ಹೊಳೆಯುವ ಕಣ್ಣನು ಚುಂಬಿಸುವೆ
ಪ್ರಣಯದೌತಣವ ನೀಡು ಬಾರೆ
ರಸಲೋಕ ಸಂಚಾರ ಮಾಡೋಣ  ಬಾರೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಮದರಂಗಿ

ಅಂಗೈ ತುಂಬ ಕೆಂಪು ಕೆಂಪು ಚಿತ್ತಾರಗಳು
ಏನು ಚಂದವೆ ಗೆಳತಿ ನಿನ್ನ ಕರಗಳು
ಎಷ್ಟು ಅದೃಷ್ಟ ಮಾಡಿವೆಯೊ ಆ ಮದರಂಗಿ
ನಿನ್ನ ಕೋಮಲ ತ್ವಚೆಯಲಿ ಬೆರೆಯಲು

ಏನು ತುಡಿತವೆ ಎನಗೆ ನಿನ್ನ ಕೈಯ ಚುಂಬಿಸಲು
ಆಸೆಯಾಗಿದೆ ನಿನ್ನ ಕೈಯ ಎನ್ನ ಕೈಯಲಿ ಬೆಸೆಯಲು
ಬೆರಳ ತುಂಬಾ ಪಸರಿದೆ ರಂಗು ರಂಗು ಕವಲುಗಳು
ನೀ ಗೀಚಿದೆ ಎನ್ನ ಹೃದಯದಿ ಸುಂದರ ಚಿತ್ರಗಳು

ನಾನಾಗಬಾರದಿತ್ತೆ ನಿನ್ನ ಕೈಯ ಮದರಂಗಿ
ಮುತ್ತಿಡುತ್ತಿದ್ದೆ ಸದಾ ನನ್ನ ಮನವ ತುಂಬಿ
ಎಂದೆಂದು ಹೀಗೆ ಇರಲಿ ನಿನ್ನ ಬಾಳಲಿ ರಂಗಾಗಿ
ನನ್ನ ಉಸಿರಲಿ ನಿನ್ನ ಉಸಿರನ್ನು ತುಂಬಿ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಏನು ಬರಹ ಬರೆದೆಯೊ

ಏನು ಬರಹ ಬರೆದೆಯೊ ನನ್ನ ಹಣೆಯಲಿ
ಯಾರ ದೂರಲಿ ಯಾರ ಸೇರಲಿ
ಜೊತೆಯಾಗಿ ಸಾಗುವ ಪಯಣಿಗ
ಯಾರೆಂದು ತಿಳಿಯಲಿ

ಸೂತ್ರದಾರ ನೀನು ಪಾತ್ರದಾರಿ ನಾನು
ಹಿಡಿವ ಕುಣಿಕೆ ಹಿಡಿದು ನನ್ನ
ಕುಣಿಸುತಿರುವೆ ಏನು

ಅರಳಿದ ಪ್ರೀತಿ ಕಥೆಗೆ
ಎದುರು ನಿಂತಿತೆ ಜಗವು
ಜೋಡಿ ಹಕ್ಕಿಯಂತೆ
ಹಾರಲು ಬಿಡುವರೇನು

ಅಂತರಾಳದ ಭಾವನೆ
ಯಾರು ಬಲ್ಲರು
ಒಂದಾಗೊ ಜೀವಗಳನ್ನು
ದೂರ ಮಾಡುವರೇನು

ನೋವು ನಲಿವು ಎಲ್ಲಾ ದಿಟವೆ
ಬಾಳ ಪಯಣದಿ
ನೋವಲ್ಲೂ ನಲಿವು ಇದೆ
ತಿಳಿಯದಾದರೇನು

ಕಾಸು ಗೀಸು ಎಂದು ಜನರು
ಬಾಯಿ ಬಿಡುವರೇನು
ಮೂರು ದಿನದ ಈ ಬಾಳಲಿ
ಯಾರು ಅಚಲವೇನು

ಹುಟ್ಟು ಆಕಸ್ಮಿಕ ಸಾವು ನಿಶ್ಚಿತ
ಎಂಬ ಮಾತ ತಿಳಿಯದಾದರೇನು
ಬಂದು ಹೋಗೊ ನಡುವೆ ಬೆರೆತು
ಬಾಳು ನಡೆಸಲೇನು

ರಚನೆ: ಶಶಿಕುಮಾರ್ ವಿ. ಕುಲಾಲ್ 

Thursday, May 30, 2013

ಮುಗಿಲು ಕೆಂಪಾಯಿತು

ಮುಗಿಲು ಕೆಂಪಾಯಿತು ಪ್ರೀತಿ ಅರಳಿತು
ಪ್ರಣಯದಿ ತೇಲಿತು  ಅನುರಾಗ ಮೂಡಿತು
ತನುಮನ ಒಂದಾಯಿತು ಕನಸು ನನಸಾಯಿತು
ಮನಸು ಹಾಡಿತು ಸರಸ ಸುರುವಾಯಿತು

ಹಕ್ಕಿಯಂತೆ ಹಾರಿ ಹಾರಿ ಗಗನದಲಿ ತೇಲಿತು
ಬೆರೆತಾಗ ನಾನು ನೀನು ಈ ಜಗವೇ ನಾಚಿತು
ಕಂಡಾಗ ಕೆನ್ನೆ ನಿನ್ನ ಕೆಂಪಾಗಿ ಹೋಯಿತು
ಮೂಡಣದ ರವಿತೇಜದ ರಶ್ಮಿಯಂತಾಯಿತು

ಈ ಧರೆಯು ನಾಕದಂತೆ ನಮಗಿಂದು ಕಂಡಿತು
ಪ್ರೀತಿಸಿ ಸೇರಲು ಆಸೆಯು ಚಿಮ್ಮಿತು
ಮನಸುಗಳು ಬೆರೆತಾಗ ಅದೇನೋ ಸುಖವೋ ಕಾಣೆ
ಏಳೇಳು ಜನುಮವು ಒಂದಾಗಿರುವ ಓ ಜಾಣೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ನೆನಪುಗಳ ಯಾತ್ರೆ

ಸಾಗುತಿದೆ ನೆನಪುಗಳ
ಯಾತ್ರೆ ಮನದಲಿ
ಹರಿಯಿತು ಕಣ್ಣೀರು
ನೆನೆದು ಕಂಗಳಲಿ

ಎಷ್ಟೊಂದು ಮಧುರ
ಎಷ್ಟೊಂದು ಸೊಗಸು
ಎಷ್ಟೊಂದು ಸುಂದರ
ಯಾಕಯಿತೀಗ ನನ್ನ ಬಾಳು
ಖಾಲಿ ಎಲುಬಿನ ಹಂದರ

ಇದ್ದಾರೂ ಎಲ್ಲ ನನ್ನವರೆಂದು
ಯಾರನ್ನು ನಂಬಲಿ
ಇದ್ದಾಗ ಕಾಸು ಕೈಯಲ್ಲಿ ನಿನ್ನ
ಹಾಕುವರು ರತ್ನಗಂಬಳಿ

ಯಾರದು ತಪ್ಪು ಯಾರದು ಒಪ್ಪು
ನಾನೇಕೆ ತಿಳಿಯದಾದೆ
ಯಾರಿಗೆ ಬೇಕು ನರಕದ ಬಾಳು
ಸಾವೇಕೆ ಬರಬಾರದೆ

ಬೀಸುತಿಹ ತಂಗಾಳಿ ಬಿರುಗಾಳಿಯಾಯಿತೆ
ಈ ಬಾಳು ಬರಡಾಯಿತೆ
ನಾ ಕಟ್ಟಿದ ಬಾಳಿನಾ ಸೌಧ
ದೊಪ್ಪೆಂದು ಬಿದ್ದೊಯಿತೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಕನಸಿನ ಉಯ್ಯಾಲೆ

ತೇಲುತಿದೆ ಮನಸು
        ಕನಸಿನ ಉಯ್ಯಾಲೆಯಲಿ
ಸುಮಧುರ ಸೊಗಸು
        ನನ್ನವಳ ಜೊತೆಯಲಿ

ಬರೆದಿಹ ಬ್ರಹ್ಮ ಸೇರಿಸಿ ನಮ್ಮನು
ಯಾತಕೆ ಹೆದರುವೆ ಸೇರು ನನ್ನನು
ಬೆದರದಿರು ಈ ಜಗಕೆ ನಂಬು ನನ್ನನು
ಮೋಹಿಸಿ ನೀ ಬಾ ಕೈಬಿಡೆನು ನಿನ್ನನು

ಬಾಳುವ ಜೊತೆಯಾಗಿ ಪ್ರೀತಿಯ ಅರಮನೆಯಲಿ
ತೂಗುವೆ ನಿನ್ನನು ನನ್ನೆದೆಯ ಜೋಕಾಲಿಯಲಿ
ಬಾಳಿನ ತೇರಲಿ ಸಾಗುವ ಜೊತೆಯಲಿ
ಹಾಸುವೆ ಪ್ರೀತಿಯ ಕಂಬಳಿ ನೀನಡೆವ ಹಾದಿಯಲಿ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಲಾಸ್ಯ

ಪುಟ್ಟ ಪುಟ್ಟ ಕಂಗಳಲಿ
         ಮನವ ಸೆಳೆವ ಈ ಬಾಲೆ
ಮುದ್ದು ಮುದ್ದು ಮುಖದಲಿ
         ಮನೆಯ ದೀಪ ಈ ಬಾಲೆ

ನುಡಿಯು ಅವಳ ಮುತ್ತಿನಂತೆ
ಅವಳು ಅತ್ತರೆ ಗಾನ ಸುಧೆಯೊ
ನಡಕೆ ಅವಳ ನಾಟ್ಯದಂತೆ
ನಗುವು ಅವಳ ಇಂಚರವೊ

ತಾಯ ಮಡಿಲ ಪ್ರೇಮ ಸುಧೆಯೊ
ಮನೆಯ ನಂದಾ ದೀಪವೊ
ಹೆಸರು ಅವಳ ಲಾಸ್ಯವೊ
ಹೆಸರಿನಂತೆ ಸುಮಧುರವೊ

ಅವಳ ಮಾತಲಿ ಜಗವ ಮರೆತೆ
ಯಾವ ಜನ್ಮದ ಬಂಧನವೊ
ಅಪ್ಪಿ ಮುದ್ದು ಮಾಡಲು ಅವಳ
ಸ್ವರ್ಗ ಧರೆಗೆ ಇಳಿದಿದೆಯೊ

ರಚನೆ: ಶಶಿಕುಮಾರ್ ವಿ. ಕುಲಾಲ್ 

Wednesday, May 29, 2013

ನೀ ಎಲ್ಲಿ ಮರೆಯಾದೆ

ಬಾಳಿನ ಕಡತಕೆ ರಂಗನು ಚೆಲ್ಲಿ
ಎಲ್ಲಿ ಮರೆಯಾದೆ ..... ನೆನಪ ಸುಳಿಯಾದೆ
              ಗೆಳತಿ ..... ಯಾಕೆ ಹೀಗಾದೆ
ದುಗುಡವ ಮರೆಸಿ ಹುರುಪನು ತುಂಬಿ
ಎಲ್ಲಿ ನೀ ಹೋದೆ .... ಈ ನೋವು ತಾಳೆನೇ
              ಗೆಳತಿ .... ದುಃಖವಾ ಸಹಿಸೆನೇ

ನನ್ನಯ ಕಂಗಳಲಿ ಕನಸನು ತುಂಬಿ
ಬದುಕುವ ಆಸೆ ನೀ ತೋರಿಸಿದೆ
ಬಾಳಿನ ಪುಟದಲಿ ಹೊಸ ಅಧ್ಯಾಯ ಬರೆದು
ಅರ್ದದಿ ನಿಲ್ಲಿಸಿದೆ ..... ಎಲ್ಲಿ ಮರೆಯಾದೆ

ನಿಸ್ತೇಜವಾದ ಮೊಗದಲಿ ಹರುಷವ ತುಂಬಿದೆ
ಅಂತರಾಳದಿ ಬಯಕೆಯ ಚಿಗುರು ತುಂಬಿದೆ
ನವಿರಾಗಿ ಚಿಗುರಿದ ಆಸೆಯ ಮೊಳಕೆಯ
ಚಿವುಟಿ ಯಾಕೆ ಹೋದೆ .... ಎಲ್ಲಿ ಮರೆಯಾದೆ

ಚಿಗರೆಯಂತೆ ಹಾರುತಾ ಮನದೊಳಗೆ ನುಗ್ಗಿದೆ
ಕನಸಿನಾ ಸೌಧವಾ ಅಲ್ಲಿಯೇ ಕಟ್ಟಿದೆ
ಹಾಡುತಾ ಕುಣಿಯುತಾ ಹೃದಯಾಂಗಳದಿ ಮೆರೆದೆ
ನಮ್ಮಿಲನ ಸನಿಹವಿರುವಾಗ..... ನೀ ಎಲ್ಲಿ ಮರೆಯಾದೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಪ್ರಶ್ನೆಯಾದೆ ನೀನು

ಬೀಸುತಿದೆ ಬಿರುಗಾಳಿ
ಮನಸ್ಸಲ್ಲೇನೋ ತಳಮಳ
ಹರಿಯುತಿದೆ ಕಂಬನಿ ಕಂಗಳಲಿ
ನಿನ್ನ ನೆನಪಿನಲಿ
ಪ್ರಶ್ನೆಯಾದೆ ನೀನು
ನನ್ನ ಬಾಳಲಿ
ಯಾಕೆ ಯಾಕೆ ಯಾಕೆ
ಎಂದರಿಯದಾದೆ ನಾನು

ಉರಿಬಿಸಿಲ ಬೇಗೆಯಲಿ
ಸುಟ್ಟುಹೋದ ಪುಷ್ಪವಾದೆ
ಮರುಭೂಮಿಯ ನೆಲದಲಿ
ಬತ್ತಿಹೋದ ಕೆರೆಯಾದೆ
ನನ್ನಷ್ಟಕ್ಕೆ ನಾನಿದ್ದೆ
ಯಾಕೆ ನೀ ಬಂದೆ
ನನ್ನ ಬಾಳಲಿ
ಯಾಕೆ ಯಾಕೆ ಯಾಕೆ
ಎಂದರಿಯದಾದೆ ನಾನು

ನೀನಾದೆ ಮಿಡಿತ ನೀನಾದೆ ತುಡಿತ
ನನ್ನನ್ನು ಸೆಳೆದು ನೀನಾದೆ ಹೃದಯದಾ ಬಡಿತ
ನೀ ಹೋದೆಯೆಂದರೆ ಬಡಿತವೆ ನಿಂತಂತೆ
ಏನಿದೆ ಹೇಳೇ ಆ ನಂತರ
ಬರೇ ಶೂನ್ಯ ಶೂನ್ಯ ಶೂನ್ಯ
ನಿನಗರಿವಾದಾಗ ನಿಂತಿತಲ್ಲೇ
ಪ್ರಾಣದ ಪಕ್ಷಿ ಹಾರಿತಲ್ಲೆ
ಪ್ರಾಣದ ಪಕ್ಷಿ ಹಾರಿತಲ್ಲೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ತಿಳಿಯದಾದೆನು ನಾ

ತಿಳಿಯದಾದೆನು ನಾ
      ನಿನ್ನ ಹೃದಯವ

ಆಡೊ ಮಾತಿನಲ್ಲಿ ಪ್ರೀತಿಯಿದೆ
ಇರೊ ಸಲುಗೆಯಲ್ಲಿ ಮಮತೆಯಿದೆ
ಕಂಗಳೆರಡು ಬೆರೆಯಲು
ಯಾಕೆ ಹೋಗುವೆ ... ದೂರ
ತಿಳಿಯದಾದೆನಾ

ಮನವ ಬಿಚ್ಚಿ ನನ್ನಲಿ ನೀ ಬೆರೆತು ಹೋದೆ
ಯಾವ ಪರಿವೆಯಿಲ್ಲದೆ ನನ್ನ ಪ್ರೇಮಿಸಿದೆ
ಮನಸುಗಳೆರಡು ಬೆಸೆಯಲು
ಯಾಕೆ ಹೋಗುವೆ ... ದೂರ
ತಿಳಿಯದಾದೆನಾ

ತೇಲಿ ಬಂದೆ ಅಲೆ ಅಲೆಯಾಗಿ ನನ್ನ ಜೀವನದ ಸಾಗರದಿ
ಕೊಟ್ಟೆ ಹರುಷ ಪರಿ ಪರಿಯಾಗಿ ನನ್ನ ಬಾಳ ಪಯಣದಿ
ಒಂದೆ ನೌಕೆ ಸೇರಲು
ಯಾಕೆ ಹೋಗುವೆ ... ದೂರ
ತಿಳಿಯದಾದೆನಾ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಕಮಲವೇನು ಅರಳಿದ ನೀನು

ಕಮಲವೇನು ಅರಳಿದ ನೀನು
              ಉಷೆಯ ಕಿರಣದಿ
ಕವಿತೆಯೇನು ಬರೆದ ನೀನು
             ಕವಿಯ ಭಾವದಿ
ನಿನ್ನ ಅಂದವ ಹೇಗೆ ಹೊಗಳಲಿ
ಪದಗಳೇ ಸಾಲದೆ ..... ಪದಗಳೇ ಸಾಲದೆ .....

ನಡೆಯುತಿರಲು ಶಿಲಾ ಬಾಲಿಕೆಯಂತೆ
ಕುಣಿಯುತಿರಲು ನೀ ನವಿಲಿನಂತೆ
ಹೊಳೆಯುತಿರುವೆ ನಗಲು ನೀನು ಗಗನದಿ ತಾರೆಗಳಂತೆ
ಮರೆತೆನು ನಾ ಹಾಡಲು ನೀನು ಇಂಪಾದ ಕೋಗಿಲೆಯಂತೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

Tuesday, May 28, 2013

ಮುಂಗಾರು ಮಳೆಯಲಿ

ಮುಂಗಾರು ಮಳೆಯಲಿ ಮಿಂದ ಧರೆಯಂತೆ
ಆಗಿಹೆ ನಾನಿಲ್ಲಿ ....
ನಿನ್ನ ಪ್ರೀತಿಯಲಿ .... ನಿನ್ನ ಪ್ರೀತಿಯಲಿ ....

ಆಟವು ಬೇಡ ಊಟವು ಬೇಡ
ಯಾಕೆ ಹೇಳೆಯಾ ..... ??
ಹೃದಯದ ಬಡಿತ ಕೇಳಲು ಇಲ್ಲ
ಉಸಿರಿಗೆ ಹಿಡಿತ ಇಲ್ಲಿಲ್ಲ
ಮನಸನು ಸೆಳೆಯುವ ಓ ಗುಲಾಬಿಯೆ ಹೇಳೇ ಎಲ್ಲಿರುವೆ
ಗೆಳತಿ .... ಹೇಳೇ ಎಲ್ಲಿರುವೆ

ನಗುವು ಇಲ್ಲ ಅಳುವು ಇಲ್ಲ
ಯಾಕೆ ತಿಳಿಸೆಯಾ .... ??
ನಿನ್ನಯ ರೂಪವ ಸ್ಮರಿಸುತ ಮನದಲಿ
ಮೂಡಿದೆ ಚಿತ್ತಾರ ಕಂಗಳಲಿ
ಹೃದಯದಿ ಮಿನುಗುವ ಮಿನುಗು ತಾರೆ ಹೇಳೇ ಎಲ್ಲಿರುವೆ
ಗೆಳತಿ .... ಹೇಳೇ ಎಲ್ಲಿರುವೆ

ಬೆಳಕು ಇಲ್ಲ ಕತ್ತಲು ಇಲ್ಲ
ಹೀಗೇಕಾದೆ ಹೇಳೆಯಾ .... ??
ಕತ್ತಲು ತುಂಬಿದ ಕಾನನದಲ್ಲಿ
ಬೆಳಕ ನೀನು ಹರಿಸೆಯಾ
ಬಾಳ ಪಯಣದಿ ಬಂದು ಸೇರು ಹೇಳೇ ಎಲ್ಲಿರುವೆ
ಗೆಳತಿ .... ಹೇಳೇ ಎಲ್ಲಿರುವೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಬೆಳಕಾಯಿತು ಈ ಬಾಳು

ಬೆಳಕಾಯಿತು ಈ ಬಾಳು
ಹಣತೆಯೊಂದು ಹಚ್ಚಿದಂತೆ
ನನಸಾಯಿತು ಈ ಕನಸು
ನೀ ಬಂದು ಸೇರಿದಂತೆ

ನೋಡುವೆನು ನಿನ್ನ ಕಣ್ಣಲ್ಲಿ ಕಣ್ಣಾಗಿ
ಸೇರುವೆನು ಚಿನ್ನ ಉಸಿರಲ್ಲಿ ಉಸಿರಾಗಿ
ಎಂದೆಂದೂ ನೀನಿರು ನನ್ನಲ್ಲಿ
ಬಾಳ ಬೆಳಗೊ ಜ್ಯೋತಿಯಂತೆ

ನೀ ಬಂದು ಸೇರಿದಾಗ ಸವಿಜೇನ ಕಡಲಿನಂತೆ
ನೀ ಆಡುವ ಮಾತುಗಳು ಮಲ್ಲಿಗೆಯ ಹೂವಿನಂತೆ
ನಾವಿರುವ ಎಂದೆಂದೂ ಬಾಳಲ್ಲಿ
ಶೃತಿಲಯದ ಕಾವ್ಯದಂತೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

Monday, May 27, 2013

ನಿನ್ನ ನೋಡಲೆಂದು

ನಿನ್ನ ನೋಡಲೆಂದು ಕಾದಿರುವೆನಿಂದು
    ಬರಲಾರೆಯಾ ಬೇಗ ನನ್ನ ಸೇರಲೆಂದು
ನಿನ್ನ ನೋಡಲೆಂದು ಕಾದಿರುವೆನಿಂದು
    ಬರಲಾರೆಯಾ ಬೇಗ ನನ್ನ ಸೇರಲೆಂದು

ನಿನ್ನ ಬಳಸಿ ತೋಳಲಿ  ಹಾಡುವೆನು ಪ್ರೇಮರಾಗ
    ನಾನು ನೀನು ಸೇರಲು ಅದುವೇ ಅನುರಾಗ
ನಿನ್ನ ಬಳೆಯ ನಾದವೇ ನಮಗೆ ಪ್ರಣಯರಾಗ
    ನಿನ್ನ ಗೆಜ್ಜೆ ಸ್ವರಕೆ ಪಲ್ಲವಿ ಬೆರೆತಾಗ

ಹಸಿರು ಸೀರೆ ದರಿಸಿ ನೀ ಬಂದು ನಿಂತಾಗ
    ಓರೆ ನೋಟದಿ ನನ್ನ ನೀ ಮನವ ಕದ್ದಾಗ
ಅಪ್ಪಿ ಮುದ್ದು ಮಾಡುವೆ ನಿನ್ನ ಮೊಗವ ಕಂಡಾಗ
    ಬಳುಕುವ ನಡು ಹಿಡಿದು ನಿನ್ನ ಬರ ಸೆಳೆದಾಗ

ಕೆಂಪು ಗಲ್ಲ ಹಿಡಿದು ಗೇಲಿ ನಿನ್ನ ಮಾಡುವೆ
   ತುಂಟ ನಗೆ ನಕ್ಕಾಗ ಪ್ರೀತಿ ನಿನ್ನ ಮಾಡುವೆ
ನಾಚಿ ನೀ ನಿಂತಾಗ ಕೆಂದುಟಿಯ ಹೀರುವೆ
   ಹೃದಯ ನಿನ್ನ ಬಡಿದಾಗ ಅದರುಸಿರು ನಾನಾಗುವೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಒಂಟಿ

ಗೂಡು ಸೇರಲು ಆ ರವಿ
ಸೋಕಿದೆ ಸಂಜೆ ತಂಗಾಳಿ
ನೋಡುತ ನಿಂತಿಹೆ ನಾನಲ್ಲಿ
ಒಂಟಿಯಾಗಿಹ ಬಾಳಲ್ಲಿ

ಯಾಕೀ ಭವಣೆ ಯಾಕೀ ಬಾಳು
ಸೇರಬಾರದೆ ಭುವಿಯೊಳಗೆ
ಯಾಕೀ ಕೋಪ ಯಾಕೀ ತಾಪ
ಲೀನವಾಗಬಾರದೆ ಪಂಚಭೂತದೊಳಗೆ

ಹೇಳೋರು ಇಲ್ಲ ಕೇಳೋರು ಇಲ್ಲ
ಪ್ರೀತಿ ಎಂಬುದೇ ತಿಳಿದಿಲ್ಲ
ನಿದ್ದೆಯೂ ಇಲ್ಲ ಕನಸೂ ಇಲ್ಲ
ನನಗಾವುದರ ಅರಿವಿಲ್ಲ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಅನುರಾಗ ಬೆರೆತಾಗ

ಅನುರಾಗ ಬೆರೆತಾಗ
      ಅದೇನೋ ಹಿತವಿದೆ
ಅನುಬಂಧ ಬೆಸೆತಾಗ
      ಅದೇನೋ ಸೊಗಸಿದೆ

ಹೃದಯವೀಣೆ ಮಿಡಿಯುತಿದೆ ಅದೇಕೋ ನಾ ಕಾಣೆ
ಉಸಿರು ಉಸಿರಲೆ ಹಾಡುತಿದೆ ಕೇಳೇ ನಿನ್ಹಾಣೆ
ತುಡಿಯುತಿದೆ ಭಾವನೆಗಳು ಅದೇಕೋ ನಾ ಕಾಣೆ
ಮೂಡುತಿದೆ ಹೊಂಗನಸು ಕಣ್ಣುಗಳಲಿ ಕೇಳೇ ನಿನ್ಹಾಣೆ

ಅನುರಾಗ ಬೆರೆತಾಗ
      ಅದೇನೋ ಹಿತವಿದೆ
ಅನುಬಂಧ ಬೆಸೆತಾಗ
      ಅದೇನೋ ಸೊಗಸಿದೆ

ಶೃತಿಲಯವು ಸೇರಲು ನೀ ಬಂದೆ ಬಾಳಲಿ
ಪ್ರೇಮಕಾವ್ಯ ಮೂಡಲು ನೀ ಬಂದೆ ಉಸಿರಲಿ
ಮನಸುಗಳು ಸೇರಲು ಈ ಧರೆಯು ಸ್ವರ್ಗವು
ನೀನೆಂದು ನಗುತಿರಲು ಈ ಬಾಳು ಧನ್ಯವು

ಅನುರಾಗ ಬೆರೆತಾಗ
      ಅದೇನೋ ಹಿತವಿದೆ
ಅನುಬಂಧ ಬೆಸೆತಾಗ
      ಅದೇನೋ ಸೊಗಸಿದೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ನೀ ಬಂದೆ ಬಾಳಿಗೆ

ನೀ ಬಂದೆ ಬಾಳಿಗೆ
     ಹೊಸತನವ ತಂದೆ
ಕೊನರದ ಕೊರಡಿಗೆ
     ಚಿಗುರುತನ ತಂದೆ

ನೊಂದು ಹೋದ ಮನಕೆ
     ಹೊಸ ಚೈತನ್ಯವಿತ್ತೆ
ಬೆಂದು ಹೋದ ಜೀವಕೆ
     ಉಲ್ಲಾಸದ ಸೊಬಗನ್ನಿತ್ತೆ

ಪ್ರೀತಿಯಾ ಸಿಂಚನ
     ಉಸಿರಿನಾ ಮಿಲನ
ಜನುಮದಾ ಬಂಧನ
     ನಮ್ಮ ಸಮ್ಮಿಲನ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಪ್ರತಿಕ್ಷಣ

ಗಗನದಿ ಆಗಿಹೆ
     ಮೇಘಗಳ ಮಿಲನ
ಸುರಿದಿದೆ ಮಳೆಯು
     ಭುವಿಗೆ ತಂಪನ

ಮೊದಲ ಮಳೆ ಹನಿಗೆ
     ಅದೇನೋ ತಲ್ಲಣ
ನೆನೆದಾಗ ಮಳೆಯಲ್ಲಿ
     ಹೃದಯದಿ ಏನೋ ಕಂಪನ

ಹೊರಟಿದೆ ಮನದಲ್ಲಿ
     ಬಯಕೆಗಳ ದಿಬ್ಬಣ
ಎದೆಯಾಳದಲ್ಲಿ ಮೂಡಿತು
     ನನ್ನವಳ ಚಿತ್ರಣ

ಮೂಕ ವಿಸ್ಮಿತನಾದೆ
    ನಿನ್ನ ಕಂಡಾಗ ಆ ಕ್ಷಣ
ಎಂದೆಂದೂ ಹೀಗೆ ಇರು
    ನನ್ನೊಂದಿಗೆ ನೀನು ಪ್ರತಿಕ್ಷಣ

ರಚನೆ: ಶಶಿಕುಮಾರ್ ವಿ. ಕುಲಾಲ್ 

Sunday, May 26, 2013

ಯಾರವಳು

ಯಾರವಳು ಬಂದವಳು
      ನನ್ನ ಹೃದಯ ಕದ್ದವಳು 
ಕಣ್ಣಲಿ ಆಸೆ ತುಂಬಿದವಳು 
     ಬದುಕಲಿ ರಂಗು ಚೆಲ್ಲಿದವಳು 
ಪ್ರೀತಿಯ ಭಾಷೆ ಕಲಿಸಿದವಳು 
     ಪದಗಳಿಗೆ ಸ್ವರವ ನೀಡಿದವಳು 
ಕನಸಲಿ ನಿತ್ಯ ಬರುವವಳು 
     ನಗುವಲಿ ಮುತ್ತು ಚೆಲ್ಲುವವಳು 
ಮಾತಲಿ ಮತ್ತು ಬರಿಸುವಳು 
     ಯಾರಾದರೇನು ಅವಳು ನನ್ನವಳು

ರಚನೆ: ಶಶಿಕುಮಾರ್ ವಿ. ಕುಲಾಲ್ 

Friday, May 24, 2013

ಕಮಲವು ನೀರಿಗೆ ಚಂದ

ಕಮಲವು ನೀರಿಗೆ ಚಂದ
ತಾರೆಯು ಗಗನಕೆ ಚಂದ
       ನೀ ಬರಲು ನನ್ನ ಸನಿಹ
             ಈ ಬಾಳೆ ಅಂದ ಚಂದ

ಹೂವಿಗೆ ಪರಿಮಳ ಚಂದ
ಮೇಘಕೆ ಮಳೆಯು ಚಂದ
ಹಾಡುವಾ ಕೋಗಿಲೆಗೆ ಇಂಪಾದ ಸ್ವರವೇ ಚಂದ
ಹರಿಯುವಾ ನದಿಗಳಿಗೆ ಜುಳುಜುಳು ನಾದವೆ ಚಂದ
ನೀ ಬಂದು ಸೇರಿದರೆ ಪ್ರೇಮದ ಅರಮನೆ ಚಂದ
ನೀ ಬಂದು ಸೇರಿದರೆ ಪ್ರೇಮದ ಅರಮನೆ ಚಂದ

ಕಮಲವು ನೀರಿಗೆ ಚಂದ
ತಾರೆಯು ಗಗನಕೆ ಚಂದ
       ನೀ ಬರಲು ನನ್ನ ಸನಿಹ
             ಈ ಬಾಳೆ ಅಂದ ಚಂದ

ಮೂಡುವ ಉಷೆಯು ಚಂದ
ಹುಣ್ಣಿಮೆ ಶಶಿಯು ಚಂದ
ಹಚ್ಚನೆ ಹಸಿರಲಿ ಮಿನುಗುವ ಭುವಿಯೆ ಚಂದ
ಮುಂಗಾರು ಮಳೆಯಲ್ಲಿ ನೆನೆಯುವ ಕನಸೆ ಚಂದ
ನನ್ನೆದೆಯ ಗೂಡಲ್ಲಿ ನೆಲೆಸಿದ ನೀನೆ ಚಂದ
ನನ್ನೆದೆಯ ಗೂಡಲ್ಲಿ ನೆಲೆಸಿದ ನೀನೆ ಚಂದ

ಕಮಲವು ನೀರಿಗೆ ಚಂದ
ತಾರೆಯು ಗಗನಕೆ ಚಂದ
       ನೀ ಬರಲು ನನ್ನ ಸನಿಹ
             ಈ ಬಾಳೆ ಅಂದ ಚಂದ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಯಾಕೆ ನೀ ಮಂಕಾಗಿ ಕುಳಿತಿ

ಮಾತನಾಡೆಯಾ ಗೆಳತಿ
                    ಈ ಮನದ ಒಡತಿ
ಯಾಕೆ ನೀ ಮಂಕಾಗಿ ಕುಳಿತಿ ...... ಗೆಳತಿ
ಯಾಕೆ ನೀ ಮಂಕಾಗಿ ಕುಳಿತಿ ......

ನಿನ್ನ ದನಿಯ ಇಂಚರವಾ
ಕಾತರಿಸಿವೆ ಕಿವಿಗಳು ಕೇಳಲು
ಈ ಜೀವ ಕಾದಿದೆ
ನಿನ್ನ ಸನಿಹ ಬರಲು

ಮಾತನಾಡೆಯಾ ಗೆಳತಿ
                    ಈ ಮನದ ಒಡತಿ
ಯಾಕೆ ನೀ ಮಂಕಾಗಿ ಕುಳಿತಿ ...... ಗೆಳತಿ
ಯಾಕೆ ನೀ ಮಂಕಾಗಿ ಕುಳಿತಿ ......

ಚಡಪಡಿಸಿವೆ ನಯನಗಳು
ನಿನ್ನ ಅಂದ ನೋಡಲು
ಉದಯಿಸಿವೆ ಆಸೆಗಳು
ನಿನ್ನ ಸೇರಿ ಬಾಳಲು

ಮಾತನಾಡೆಯಾ ಗೆಳತಿ
                    ಈ ಮನದ ಒಡತಿ
ಯಾಕೆ ನೀ ಮಂಕಾಗಿ ಕುಳಿತಿ ...... ಗೆಳತಿ
ಯಾಕೆ ನೀ ಮಂಕಾಗಿ ಕುಳಿತಿ ......

ರಚನೆ: ಶಶಿಕುಮಾರ್ ವಿ. ಕುಲಾಲ್ 

Thursday, May 23, 2013

ನೀ ಕವಿತೆಯಾದೆ

ಭಾವಗಳ ಲೋಕದಲಿ ನೀ ಭಾವನೆಯಾದೆ
ಬಾಳಿನ ಪುಟದಲ್ಲಿ ನೀ ಲೇಖನಿಯಾದೆ
ಕಲ್ಲಿನ ಮನಸನು ಕೆತ್ತಿ ನೀ ಶಿಲ್ಪಿಯಾದೆ
ಪ್ರೀತಿಸಲು ಕಲಿಸಿದ ನೀ ಪ್ರೇಯಸಿಯಾದೆ

               ಬತ್ತಿದ ನಯನಗಳಿಗೆ ನೀ ಕನಸಾದೆ
               ಪ್ರೀತಿಯ ತೇರಿಗೆ ನೀ ಗಾಲಿಯಾದೆ
               ಒಲವಿನಾ ಬೀಜವಾ ಬಿತ್ತಿ ನೀ ಸ್ನೇಹಿತೆಯಾದೆ
               ಬದುಕಿನ ಅರ್ಥವಾ ತಿಳಿಸಿ ನೀ ಸಂಗಾತಿಯಾದೆ

ಬಾಳೆಂಬ ಸಂಗೀತಕೆ ನೀ ಪಲ್ಲವಿಯಾದೆ
ಹೃದಯದಾ ದೇಗುಲಕೆ ನೀ ದೇವತೆಯಾದೆ
ಬದುಕೆಂಬ ನೌಕೆಗೆ ನೀ ಜೊತೆಯಾದೆ
ಪದಗಳೆಂಬ ಉಸಿರಿಗೆ ನೀ ಕವಿತೆಯಾದೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ನನ್ನವಳ ಚಿತ್ತಾರ

ನೀಲಿ ಗಗನದಿ ಬೆಳ್ಳಿ ಮೋಡಗಳ ಚಿತ್ತಾರ
ಚಿತ್ತಾರದ ನಡುವಿಂದ ನನ್ನವಳ ಸಾಕ್ಷಾತ್ಕಾರ
ಪುಟಿಯುತಿದೆ ಮನಸಲಿ ಹಾಹಾಕಾರ
ನಿನ್ನ ಸೇರಲು ತವಕ ನಿರಂತರ

       ಮಳೆ ಹನಿಯ ಮುತ್ತಿನಲಿ ನಿನ್ನದೇ ಬಿಂಬ
       ಉರಿಬಿಸಿಲ ನೆರಳಲ್ಲಿ ನಿನ್ನದೇ ಪ್ರತಿಬಿಂಬ
       ಪಚ್ಚನೆ ಹಸಿರಿನಲಿ ನೀ ಸೀರೆ ಉಟ್ಟಂತೆ
       ಉದಯಿಸಿದ ಉಷೆಯು ನಿನ್ಹಣೆಯ ಬೊಟ್ಟಂತೆ

ಹುಣ್ಣಿಮೆ ಶಶಿಯಲ್ಲಿ ಕಂಡೆ ನಿನ್ನ ಮೊಗವಾ
ಬೀಸುತಿಹ ತಂಗಾಳಿಯಲಿ ಕಂಡೆ ನಿನ್ನ ಸ್ಪರ್ಶವಾ
ಮೂಡುತಿಹೆ ಮನದಲ್ಲಿ ಆಸೆಗಳ ಗೋಪುರ
ಹೃದಯದಾ ಗೂಡಲ್ಲಿ ಎಂದೆಂದೂ ನೀ ಸ್ಥಿರ

ರಚನೆ: ಶಶಿಕುಮಾರ್ ವಿ. ಕುಲಾಲ್ 

ದಿನಕರ

ಮೂಡುತಿಹ ದಿನಕರನ ಅಂದವಾ ನೋಡುತಾ
ನಿಂತೆನಾ ಸುಂದರ ಕ್ಷಣವನು ಸವಿಯುತಾ

ರಥವೇರಿ ಬರುತಿರಲು ಆ ರವಿಯು ಮೂಡಣದಿ
ಗಗನದಲಿ ಕೆಂಪು ಬಣ್ಣದಾ ರಂಗೋಲಿ
ಚಿಲಿ ಪಿಲಿ ಹಕ್ಕಿಗಳು ಹಾಡುತಿಹೆ ಶ್ರುತಿಲಯದಿ
ಮನಸುಗಳು ಕುಣಿಯುತಿವೆ ಇಂಚರವಾ ಕೇಳಿ

ಬರುತಿರಲು ಆ ಉದಯ ಭುವಿಗೆ ರಂಗನು ಚೆಲ್ಲಿ
ಪಸರಿದೆ ಮುತ್ತುಗಳು ಪನ್ನೀರ ಹನಿಗಳಲಿ
ಪರಿಮಳವು ಮಲ್ಲಿಗೆಯ ಆ ರವಿಗೆ ಸ್ವಾಗತ
ದಿನನಿತ್ಯ ಈ ಅಂದ ಈ ಜಗಕೆ ಶಾಶ್ವತ

ರಚನೆ: ಶಶಿಕುಮಾರ್ ವಿ. ಕುಲಾಲ್ 

Wednesday, May 22, 2013

ನಾನು

ಜೀವನವೆಂಬ ನೀಲ ಸಾಗರದ ಮದ್ಯದಲ್ಲಿ 
ದಡ ಸೇರಲು ಪರಿತಪಿಸುತ್ತಿರುವ 
ನಾವಿಕನು ನಾನು.....
ಆಪ್ತರಿಗಾಗಿ ಹಂಬಲಿಸುತ್ತಿರುವ 
ಆತ್ಮೀಯ ನಾನು ..... 
ಪ್ರೀತಿಗಾಗಿ ಕಾತರದಿಂದ ಕಾಯುತ್ತಿರುವ 
ಪ್ರಿಯತಮ ನಾನು .....

ರಚನೆ: ಶಶಿಕುಮಾರ್ ವಿ. ಕುಲಾಲ್ 

ನನ್ನ ಭ್ರಮೆ

ನೀ ಬಂದಾಗ ನನ್ನ ಬಾಳಿಗೆ
        ನನಗನಿಸಿತು ನೀ ನನ್ನ
               ದಾರಿದೀಪವೆಂದು
ಆಮೇಲೆ ತಿಳಿಯಿತು
        ಅದು ನನ್ನ
               ಭ್ರಮೆಯೆಂದು

ರಚನೆ: ಶಶಿಕುಮಾರ್ ವಿ. ಕುಲಾಲ್ 

ಪುಟ್ಟ ಪುಟ್ಟ ಹೆಜ್ಜೆಯಿಟ್ಟು

ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಬಾಳಿಗೆ ಬಂದವಳಾರೆ
                                     ನೀನು ...... ನೀನು .....
ದಿಟ್ಟ ದಿಟ್ಟ ಮಾತುಗಳಾಡಿ ಮನವ ಗೆದ್ದವಳಾರೆ
                                    ನೀನು ...... ನೀನು .....

ಹೃದಯವ ಕದ್ದು ಹೋದೆ
ಬಾಳಿಗೆ ಬೆಳಕು ತಂದೆ
ಮರೆಯಾಗಿ ಎಲ್ಲಿ ಹೋದೆ

ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಬಾಳಿಗೆ ಬಂದವಳಾರೆ
                                     ನೀನು ...... ನೀನು .....
ದಿಟ್ಟ ದಿಟ್ಟ ಮಾತುಗಳಾಡಿ ಮನವ ಗೆದ್ದವಳಾರೆ
                                    ನೀನು ...... ನೀನು .....

ಆಕಾಶದ ದೀಪವಾದೆ
ಸಾಗರದ ಅಲೆಗಳಾದೆ
ಮಿಂಚಂತೆ ಕಾಣದಾದೆ

ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಬಾಳಿಗೆ ಬಂದವಳಾರೆ
                                     ನೀನು ...... ನೀನು .....
ದಿಟ್ಟ ದಿಟ್ಟ ಮಾತುಗಳಾಡಿ ಮನವ ಗೆದ್ದವಳಾರೆ
                                    ನೀನು ...... ನೀನು .....

ಕನಸುನು ನೀನೆ ಆದೆ
ಉಸಿರುನು ನೀನೆ ಆದೆ
ತಟ್ಟಂತ ಎಲ್ಲಿ ಹೋದೆ

ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಬಾಳಿಗೆ ಬಂದವಳಾರೆ
                                     ನೀನು ...... ನೀನು .....
ದಿಟ್ಟ ದಿಟ್ಟ ಮಾತುಗಳಾಡಿ ಮನವ ಗೆದ್ದವಳಾರೆ
                                    ನೀನು ...... ನೀನು .....

ರಚನೆ: ಶಶಿಕುಮಾರ್ ವಿ. ಕುಲಾಲ್ 

ಮರಳಿ ಬಾ

ಆಸೆಯ ಸಾಗರದಿ ನೀ ಅಲೆಯಾದೆ
ದಡಕಪ್ಪಳಿಸಿ ನೀ ಯಾಕೆ ಹಿಂದೆ ಹೋದೆ
ಕನಸಿನಾ ಗಗನದಿ ನೀ ಮಿಂಚಾದೆ
ಈ ಬಾಳ ಬೆಳಗಿ ನೀ ಯಾಕೆ ಮರೆಯಾದೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ವಿರಹ

ಬಾನಂಚಿನಿಂದ ಧರೆಗಿಳಿದು ಬಂದೆ
ನನ್ನೆದೆಯ ಬಡಿತವಾಗಿ ನಿಂದೆ
ನನ್ನಾಸೆಯ ಮುಗಿಲೆತ್ತರಕೆ ತಂದೆ
ವಿರಹದಾ ಬೇಗೆಯಲಿ ನನ್ಯಾಕೆ ಕೊಂದೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ನನ್ನಾಕೆ

ನನ್ನ ಪುಟ್ಟ ಹೃದಯದ ಬಡಿತವೇ ನೀ
ನನ್ನ ನಯನಗಳ ಮಿಡಿತವೇ ನೀ
ನನ್ನ ಶ್ರವಣಗಳ ಇಂಚರವೇ ನೀ
ನನ್ನ ನಾಸಿಕದ ಉಸಿರೇ ನೀ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಓ ನನ್ನ ಗೆಳತಿ

ನನ್ನೊಲುಮೆಯ ಪ್ರೀತಿಯಾಗಿ
       ಹೃದಯಾಂಗಳದ ಲತೆಯಾಗಿ
               ಕನಸಿನಾ ಚಿತ್ತಾರವಾಗಿ
ಸದಾ ನನ್ನ ಬಾಳಲ್ಲಿ
          ಹಸನಾಗಿರು
               ಓ ನನ್ನ ಗೆಳತಿ

ರಚನೆ: ಶಶಿಕುಮಾರ್ ವಿ. ಕುಲಾಲ್ 

ನನ್ನುಸಿರು

ಕನಸಲಿ ಬಂದೆ
ಉಸಿರಲಿ ನಿಂದೆ
ನನ್ನುಸಿರು ನಿಂತಾಗ
ನೀ ಯಾಕೆ ನಕ್ಕು ದೂರಾದೆ ???

ರಚನೆ: ಶಶಿಕುಮಾರ್ ವಿ. ಕುಲಾಲ್ 

ಹೆಜ್ಜೆ ಗುರುತು

ಮನಸ್ಸಿನಂಗಳದಲಿ ಮೂಡಿಸಿದೆ
                ನೀ ಹೆಜ್ಜೆ ಗುರುತು......
ಕಾಲ್ಗೆಜ್ಜೆಯನಾದ ಅಚ್ಚಾಗಿದೆ
               ಶ್ರುತಿಲಯವ ಬೆರೆತು ......
ಪಾದಗಳು ನಡೆಯುತ್ತಿರಲು
              ಹಿತವಾದ ಕಂಪನ ......
ಮೃದುಲ ತ್ವಚೆಯ
             ತಂಪಾದ ತಂಪನ ......

ರಚನೆ: ಶಶಿಕುಮಾರ್ ವಿ. ಕುಲಾಲ್ 

ಹೋಗಬೇಡವೇ

ನೀ ಬಂದೆ ನನ್ನ ಬಾಳಿಗೆ ಬೆಳ್ಳನೆ ಬೆಳದಿಂಗಳಾಗಿ .....
ನೀ ಬಂದೆ ನನ್ನ ಬಾಳಿಗೆ ಬೆಳ್ಳನೆ ಬೆಳದಿಂಗಳಾಗಿ .....
ಹೋಗಬೇಡವೇ ನನ್ನ ಪ್ರೀಯೆ
             ಬಿಟ್ಟು ನನ್ನ ಮನವ
                    ಕರಿ ಮುಸುಕಿದ ರಾತ್ರಿಯನ್ನಾಗಿಸಿ ....


ರಚನೆ: ಶಶಿಕುಮಾರ್ ವಿ. ಕುಲಾಲ್ 

ಪುಟ್ಟ ಕಾವ್ಯ

ಓ ಎನ್ನ ಮೋಕೆದ ಪುಟ್ಟ ಕಾವ್ಯ
      ಈ ಇಜ್ಜಂದೆ ಎನ್ನ ಜೀವನ ಶೂನ್ಯ 
             ನಿನ್ನೊಟ್ಟಿಗೆ ಕಳೆಯಿನ ಆ ಸಮಯ ಏತ್ ರಮ್ಯ 
                      ಇಂಚೆನೆ ಉಪ್ಪುಗ ನಮ 
                      ಕೋಟಿ ಕೋಟಿ ಜನ್ಮ 
                      ಓ ಎನ್ನ ಮೋಕೆದ ಕಾವ್ಯ ....

ರಚನೆ: ಶಶಿಕುಮಾರ್ ವಿ. ಕುಲಾಲ್ 

ಚಂದ್ರಿಕೆ

ನೀ ಬರಲು ಸನಿಹ ಬಳುಕುತಿಹ ಲತೆಯಂತೆ
                          ನಾ ಮರುಳಾದೆ ನಿನ್ನ ಅಂದಕೆ
ನನ್ನುಸಿರಿಗೆ ನಿನ್ನುಸಿರು ಬೆರೆಯಲು
                          ನನ್ನ ನಾ ಮರೆತೆ ಓ ಚಂದ್ರಿಕೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಯಾಕೆ ???

ನೀ ಬಂದೆ ನನ್ನ ಬಾಳಲ್ಲಿ
                ತಂಪಾದ ತಂಗಾಳಿಯಾಗಿ
ಈ ಮನವನ್ನು ಕಲಕಿ
                ನೀ ಹೋದೆ ಬಿರುಗಾಳಿಯಾಗಿ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಇದು ಸತ್ಯ

ಗುಲಾಬಿ ಹೂವಿನ ಸುತ್ತ
                ಮುಳ್ಳಿರುತ್ತೆ
ನಗಿಸುವವರ ನಗುವಿನ ಹಿಂದೆ
                ನಗಲಾಗದಷ್ಟು ನೋವಿರುತ್ತೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

Tuesday, May 21, 2013

ನನ್ನಾಸೆ

ಮನಸ್ಸಲ್ಲಿ ನೀನಿರುವೆ ಮನಸಾಗಿ
ಕನಸಲ್ಲಿ ನೀನಿರುವೆ ಕನಸಾಗಿ
ಬದುಕಲ್ಲಿ ನೀನಿರುವೆ ಬದುಕಾಗಿ
ಎಂದೆಂದೂ ನೀನಿರು ಹಸನಾಗಿ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಪ್ರಾಣಪಕ್ಷಿ

ಕವಿ ಕೆತ್ತನೆಯ ಶಿಲಾಬಾಲಿಕೆ ನೀ
ನಿಸರ್ಗದತ್ತ ಪಾರಿಜಾತ ನೀ
ಸ್ವರ್ಗದಿಂದ ಧರೆಗಿಳಿದ ಅಪ್ಸರೆ ನೀ
ನನ್ನ ಹೃದಯಾಂತರಂಗದ ಪ್ರಾಣಪಕ್ಷಿ ನೀ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಮಾತನಾಡೆಯಾ

ಮಾತನಾಡೆಯಾ ಗೆಳತಿ
             ಹೀಗೇಕೆ ಮಂಕಾಗಿ ಕುಳಿತಿ
ಮನ ಬಿಚ್ಚಿ ಮಾತನಾಡುವ ನೀ
             ಹೀಗೇಕೆ ಕಲ್ಲಾಗಿ ನಿಂತಿ

ರಚನೆ: ಶಶಿಕುಮಾರ್ ವಿ. ಕುಲಾಲ್ 

ತೊಲಗದಿರು

ಉಸಿರು ಉಸಿರಿನಲ್ಲಿ ಉಸಿರಾಗಿರು
ಹೃದಯ ದೇಗುಲದಲ್ಲಿ ಸ್ಥಿರವಾಗಿರು
ಪೂಜಿಪೆನು ನಿನ್ನ ದಿನರಾತ್ರಿ
ತೊಲಗದಿರು ನನ್ನ ಓ ಪ್ರೀತಿ

ರಚನೆ: ಶಶಿಕುಮಾರ್ ವಿ. ಕುಲಾಲ್ 

ನನ್ನ ಕವಿತೆ

ಪದಗಳಲ್ಲಿ ಕುಳಿತಿರುವೆ ನೀ ನನ್ನ ಕವಿತೆ
ರಾಗದಲಿ ಬೆರೆತಿರುವೆ ನೀ ನನ್ನ ಕವಿತೆ
ನನ್ನೆದೆಯೆ ಗೂಡಲ್ಲಿ ನೀನಿರುವೆ ಕವಿತೆ
ನಯನದಾ ನೋಟದಲಿ ನೀನಿರುವೆ ಕವಿತೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಯಾಕೆ ಮರೆಯಾದೆ

ಸತ್ತ ಮನಸ್ಸಿಗೆ ನೀ ತುಂಬಿದೆ ಜೀವ
               ಚಡಪಡಿಸುವ ಮತ್ಸ್ಯ ಸಾಗರವ ಸೇರಿದಂತೆ
ನೀರಿಲ್ಲದ ನಯನದಿ ನೀ ತುಂಬಿದೆ ತೇವ
               ಬರಡಾದ ಕೆರೆಗೆ ಮಳೆಹನಿಯು ಬಿದ್ದಂತೆ
ಚಿಗುರೊಡೆದ ಬಯಕೆಗೆ ಸ್ಪಂದಿಸದೆ
              ನೀ ಯಾಕೆ ಮರೆಯಾದೆ ಮಿಂಚಿನಂತೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಪರಿಪೂರ್ಣ

ಶ್ರುತಿಲಯದ ಸಮ್ಮಿಲನ
      ಜನುಮ ಜನುಮದಾ ಅನುಬಂಧನ
             ಸುಖದಾ ಸ್ವಪ್ನಗಾನ
ಉಸಿರೆರಡು ಬೆರೆತಾಗ ಅದುವೇ ಪರಿಪೂರ್ಣ
                                ನಮ್ಮ ಈ ಮಿಲನ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಬೊಲ್ಕಿರಿ ಬೊಲ್ಪಾಂಡ್ ಯೇ

ಬೊಲ್ಕಿರಿ ಬೊಲ್ಪಾಂಡ್ ಯೇ....... ಉಡಲ್
             ಮೋಕೆಡ್ ಮರ್ಲಾಂಡ್ ಯೇ
ಬೊಲ್ಕಿರಿ ಬೊಲ್ಪಾಂಡ್ ಯೇ....... ಉಡಲ್
             ಮೋಕೆಡ್ ಮರ್ಲಾಂಡ್ ಯೇ

ಏನೆದಾಂತಿ ಐಸಿರೊಯೇ ....... ಕಣ್ಣ್
              ನೀರ್ ಡ್ ತೆಲ್ತ್ಂಡ್ ಯೇ .......
ಬೊಲ್ಕಿರಿ ಬೊಲ್ಪಾಂಡ್ ಯೇ....... ಉಡಲ್
             ಮೋಕೆಡ್ ಮರ್ಲಾಂಡ್ ಯೇ

ಪುಣ್ಣಿಮೆ ಚಂದ್ರನ ಪೊರ್ಲು ನಿನ್ನ ಮೋನೆ
            ಕಣ್ಣುಲು ಪನಿ ಪನಿ ಮುತ್ತುಲುಯೇ ......
ಬೊಲ್ಕಿರಿ ಬೊಲ್ಪಾಂಡ್ ಯೇ.......  ಉಡಲ್
             ಮೋಕೆಡ್ ಮರ್ಲಾಂಡ್ ಯೇ

ನೇಸರೆ ಕೆಂಪುದಾ ರಂಗ್ ನಿನ್ನ ಬಿಮ್ಮೊ
            ನಾಸಿಕ ಪೊರ್ಲುದಾ ಸಂಪಿಗೆಯೇ .....
ಬೊಲ್ಕಿರಿ ಬೊಲ್ಪಾಂಡ್ ಯೇ.......ಉಡಲ್
             ಮೋಕೆಡ್ ಮರ್ಲಾಂಡ್ ಯೇ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಹೋಗಬೇಡವೇ

ನೀ ಬಂದೆ ಬಾಳಿಗೆ ಪ್ರೇಮದ ಸಿರಿಯಾಗಿ
        ಮರೆಯಲಾರದ ಕವಿತೆಯಾಗಿ
               ನೆಲೆಸಿದೆ ನೀ ಹೃದಯ ದೇವತೆಯಾಗಿ
                        ಹೋಗಬೇಡವೇ ನೀ ನನ್ನ ತೊರೆದು
                                      ಕಣ್ಣೀರ ಹನಿಯಾಗಿ ...

ರಚನೆ: ಶಶಿಕುಮಾರ್ ವಿ. ಕುಲಾಲ್ 

ನೀನಿರುವೆ ನನ್ನ ಹೃದಯದಿ ಅಜರಾಮರ

ನೀನಿರುವೆ ನನ್ನ ಹೃದಯದಿ ಅಜರಾಮರ
                      ಯಾಕೆಂದು ಕೇಳೆಯಾ ಗೆಳತಿ ..... ??
ತಪ್ಪು ಒಪ್ಪುಗಳಿಂದ ಬೆಂದ ಮನಸ್ಸಿಗೆ
                      ಪ್ರೀತಿಯ ಸಿಂಚನ ತುಂಬಿಹೆ ನೀನು ....
ಲೋಕವೇ ಬೇಡವೆಂದ ಈ ಪ್ರಾಣಕೆ
                      ಬದುಕುವ ಆಸೆ ತುಂಬಿದೆ ನೀನು ......
ಮರುಭೂಮಿಯಂತೆ ಬರಡಾದ ಈ ಜೀವಕೆ
                      ಪನ್ನೀರ ಹನಿ ಚಿಮ್ಮಿದೆ ನೀನು .....

ರಚನೆ: ಶಶಿಕುಮಾರ್ ವಿ. ಕುಲಾಲ್ 

ನಾಕ

ಕರವ ಹಿಡಿದು ನೀ
               ನನ್ನ ಬರ ಸೆಳೆದಾಗ ....
ಕಮಲ ನಯನದಿಂದ ನೀ
               ನನ್ನ ಕಂಡಾಗ .....
ಕೆಂದುಟಿಗೆ ಸರಸರಸ
               ಮೀಟಿದಾಗ ....
ಈ ಭುವಿಯೇ ನಾಕದಂತೆ ....

ರಚನೆ: ಶಶಿಕುಮಾರ್ ವಿ. ಕುಲಾಲ್ 

ಆಸೆ

ನಿನನ್ ತೂನಗ ಆಪುಂಡು ಆಸೆ ಸಾರ ಸಾರ....
ತಿಕ್ಕ್ ಲಾ ಎಂಕ್ ಎಪಾಂಡಲಾ ಒರಾ ಒರಾ ....

ರಚನೆ: ಶಶಿಕುಮಾರ್ ವಿ. ಕುಲಾಲ್ 

ಪೊರ್ಲು

ಈ ಏಪಲಾ ಇಂಚೆನೆ ತೆಲ್ ತೊಂದು ನಲ್ ತೊಂದು ಕುಸಿಟೆ ಉಪ್ಪೊಡು .....
ಈ ಏಪಲಾ ಇಂಚೆನೆ ತೆಲ್ ತೊಂದು ನಲ್ ತೊಂದು ಕುಸಿಟೆ ಉಪ್ಪೊಡು .....
ನಿನ್ನ ಈ ಪೊರ್ಲು ತೂದು ಯಾನ್ ಯೆನನೇ ಮದತ್ ದ್ ಈ ಲೋಕ ಬುಡೊಡು

ರಚನೆ: ಶಶಿಕುಮಾರ್ ವಿ. ಕುಲಾಲ್ 

ನನ್ನವಳು

ಮಧುರ ಕಂಠದ ಇಂಚರವೂ ನೀ
ಮೂಡುತಿಹ ಉಷೆಯ ಕಿರಣವೂ ನೀ 
ಹಕ್ಕಿಗಳ ಚಿಲಿಪಿಲಿಯ ಕಲರವವೂ ನೀ 
ಮಲ್ಲಿಗೆಯ ಸುಮಧುರ ಪರಿಮಳವೂ ನೀ

ರಚನೆ: ಶಶಿಕುಮಾರ್ ವಿ. ಕುಲಾಲ್ 

Monday, May 20, 2013

ಕಾಯುತಿಹೆ ನಿನಗಾಗಿ

ಮುತ್ತು ರತ್ನಗಳಿಲ್ಲ
ವಜ್ರ ವೈಡೂರ್ಯಗಳಿಲ್ಲ
ಬಂಗ್ಲೆ ಕಾರುಗಳಿಲ್ಲ
ಆಸೆ ಆಕಾಂಕ್ಷೆಗಳಿಲ್ಲ
ಆದರೂ ಕಾಯುತಿಹೆ ನಿನಗಾಗಿ
ಬರೀಯ ಹೃದಯವನ್ನಿಟ್ಟು
ಸ್ವಚ್ಛ ಪ್ರೀತಿಯ ಹಾತೊರಕೆಯಲ್ಲಿ
ನೀ ಬರುವ ದಾರಿಯಲ್ಲಿ ...

ರಚನೆ: ಶಶಿಕುಮಾರ್ ವಿ. ಕುಲಾಲ್ 

ಬಾರೆ ನೀ ಕವಿತೆಯಾಗಿ

ಬಾ ಗೆಳತಿ ನಿನಗಾಗಿ ತೆರೆದಿದೆ ಈ ಹೃದಯ
ಬೆಳಗಿಸು ನಿನ್ನ ಸ್ಪರ್ಶದಿ ಈ ನಿಲಯ
ಕಾಯುತಿಹೆ ಈ ಒಡಲು ನಿನ್ನ ಸ್ಪರ್ಶಕೆ
ಬಾರೆ ನೀ ಕವಿತೆಯಾಗಿ ನನ್ನ ಬಾಳಿಗೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಜೀವನವೆಂದರೆ ....

ಎಲ್ಲೋ ಹುಟ್ಟಿ ಎಲ್ಲೋ ನಾಶವಾಗುವ ಜೀವಗಳು
ಹುಟ್ಟಿ ಸಾಯುವ ನಡುವೆ ಬೆಸೆಯುವ ಅದೆಷ್ಟೋ ಸೆಳೆತಗಳು
ಕೆಲವು ಒಂದಾದರೆ ಕೆಲವು ಒಂದಾಗಿಯೂ ಬೇರೆಯಾಗುವ ವಿರಹಗಳು
ಹೃದಯವನ್ನು ಬೆಸೆಯುವ ಸಂತೋಷದ ಕ್ಷಣಗಳು
ಅಂತರಾಳದಲ್ಲಿ ಪುಟಿದೇಳುವ ಚಿಕ್ಕ ಚಿಕ್ಕ ಆಸೆಗಳು
ಸಾಗರದ ಅಲೆಗಳಂತೆ ಅಪ್ಪಳಿಸುವ ನೋವುಗಳು

ರಚನೆ: ಶಶಿಕುಮಾರ್ ವಿ. ಕುಲಾಲ್ 

ಹೇಳಲಾರೆಯಾ???

ಹುಣ್ಣಿಮೆ ಚಂದಿರನ ಮೊಗದವಳೆ .....
ತಾವರೆ ಕಂಗಳಲ್ಲಿ ಸೆಳೆವವಳೇ .....
ನಿನ್ನ ನೋಟಕೆ ನಾ ಸೋತೆ
ನನ್ನ ಹೃದಯವ ಕದ್ದು ನೀ ಏತಕೆ ನಿಂತೆ ....

ರಚನೆ: ಶಶಿಕುಮಾರ್ ವಿ. ಕುಲಾಲ್ 

ನಾವಿಕ

ಜೀವನವೆಂಬ ಕಡಲಿನಲ್ಲಿ ಸಾಗುವ
ಪುಟ್ಟ ದೋಣಿಯಲ್ಲಿ
ಒಂಟಿಯಾಗಿಹ ನಾವಿಕನು ನಾನು...
ಬರಲಾರೆಯಾ ಜೊತೆಯಾಗಿ
ಬಾಳಪಯಣದಲ್ಲಿ
ಗೆಳತಿ
ನನ್ನೊಂದಿಗೆ ನೀನು... 

ರಚನೆ: ಶಶಿಕುಮಾರ್ ವಿ. ಕುಲಾಲ್ 

ಕಾವ್ಯ

ನನ್ನ ಕಲ್ಪನೆಯ ಕನಸು ನೀ ಕಾವ್ಯ....
ನನ್ನ ಹೃದಯದ ಮಿಡಿತವೇ ನೀ ಕಾವ್ಯ....
ಎಂದೆಂದು ನನ್ನಲ್ಲಿ ನನಸಾಗಿರು ....
ಕನಸಿನಾ ಪರದೆಯ ಉಸಿರಾಗಿರು ....

ರಚನೆ: ಶಶಿಕುಮಾರ್ ವಿ. ಕುಲಾಲ್ 

ಮಿಲನ

ಗರಿಗೆದರಿ ಕುಣಿಯುತ್ತಿದೆ 
                  ನನ್ನ ಮನ 
ತುಡಿಯುತ್ತಿದೆ ಪುಟಿಯಲು 
                 ಭಾವನೆಗಳ ನರ್ತನ 
ಆಸೆಗಳ ಕಲರವದ 
                 ಪುಟ್ಟ ಸಿಂಚನ 
ಕನಸಿನ ಲೋಕದಲಿ 
                 ನಮ್ಮಿಬ್ಬರ ಮಿಲನ

ರಚನೆ: ಶಶಿಕುಮಾರ್ ವಿ. ಕುಲಾಲ್