Thursday, May 30, 2013

ಮುಗಿಲು ಕೆಂಪಾಯಿತು

ಮುಗಿಲು ಕೆಂಪಾಯಿತು ಪ್ರೀತಿ ಅರಳಿತು
ಪ್ರಣಯದಿ ತೇಲಿತು  ಅನುರಾಗ ಮೂಡಿತು
ತನುಮನ ಒಂದಾಯಿತು ಕನಸು ನನಸಾಯಿತು
ಮನಸು ಹಾಡಿತು ಸರಸ ಸುರುವಾಯಿತು

ಹಕ್ಕಿಯಂತೆ ಹಾರಿ ಹಾರಿ ಗಗನದಲಿ ತೇಲಿತು
ಬೆರೆತಾಗ ನಾನು ನೀನು ಈ ಜಗವೇ ನಾಚಿತು
ಕಂಡಾಗ ಕೆನ್ನೆ ನಿನ್ನ ಕೆಂಪಾಗಿ ಹೋಯಿತು
ಮೂಡಣದ ರವಿತೇಜದ ರಶ್ಮಿಯಂತಾಯಿತು

ಈ ಧರೆಯು ನಾಕದಂತೆ ನಮಗಿಂದು ಕಂಡಿತು
ಪ್ರೀತಿಸಿ ಸೇರಲು ಆಸೆಯು ಚಿಮ್ಮಿತು
ಮನಸುಗಳು ಬೆರೆತಾಗ ಅದೇನೋ ಸುಖವೋ ಕಾಣೆ
ಏಳೇಳು ಜನುಮವು ಒಂದಾಗಿರುವ ಓ ಜಾಣೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

No comments:

Post a Comment