Friday, June 28, 2013

ಕಾದಿರುವೆ ಸೇರಲು

ಚಿಗುರಿದೆ ನಿನ್ನಯ ಮನದಲಿ
ನನಗಾಗಿ ಪ್ರೀತಿಯ ಭಾವನೆ
ಅರಳಿದೆ ನಿನ್ನಯ ಕಂಗಳಲಿ
ನನಗಾಗಿ ಜೀವನದ ಪರಿವರ್ತನೆ

ನನ್ನಲ್ಲಿ ಮಾತನಾಡಲು ನಿನಗೆಷ್ಟು ಆತುರ
ನಿನ್ನನ್ನು ನೋಡಲು ನನಗೆಷ್ಟು ಕಾತರ
ಮನಸ್ಸುಗಳ ಮಿಲನ
ಬೆರೆತಾಗ ಉಸಿರುಸಿರು
ಸ್ವರ್ಗದಾ ಸುಖವನ್ನು ನಾ ಕಂಡೆನೆ
ನಿನ್ನಯ ಸ್ಪರ್ಶದಿ ನಾ ಮಿಂದೆನೆ

ನಮ್ಮ ಸ್ನೇಹ ಜೇನಂತೆ ಮಧುರ
ನಮ್ಮ ಪ್ರೀತಿ ಬೆಳದಿಂಗಳಂತೆ ಸುಂದರ
ಒಲವಿನ ಸುಮವು
ಅರಳಲು ಘಮ ಘಮವು
ತುಂಬಿದೆ ಬಾಳಲ್ಲಿ ಹರುಷವ ನೀನು
ಕಾದಿರುವೆ ಸೇರಲು ನಿನ್ನಲ್ಲಿ ನಾನು

ರಚನೆ: ಶಶಿಕುಮಾರ್ ವಿ. ಕುಲಾಲ್ 

Thursday, June 27, 2013

ಓ ಎನ್ನ ಬಂಗಾರ

ಆ ಸೂರ್ಯೆ ಬನ್ನಗ
ನಿನ್ನ ಮೋನೆ ಕೆಂಪಾಂಡ್
ಎನ್ನ ನೆಂಪು ಮೂಡ್ನಗ
ಮನಸ್ ನಿನ್ನ ಮರ್ಲಾಂಡ್

ಪುಲ್ಯ ಕಾಂಡೆ ಬೊಲ್ಪುದ
ಮೋಕೆ ದಿಂಜಿ ಪಾತೆರ
ನಿಕ್ಕಾತ್ರ ಕಾತ್ ದ್ ಉಂತುದೆ
ಓ ಎನ್ನ ಬಂಗಾರ
ಓ ಎನ್ನ ಬಂಗಾರ

ಮನಸ್ ದ ಆಸೆ
ಈ  ಪನ್ಲ ಎಂಡ ಒರಾ
ಮಲ್ಪುವೆ ಪೂರ
ಆಸೆನ್ ಸಾರ

ಉಡಲ್ ಡೆ ಬರೆಯೆ
ಯಾನ್ ಮೋಕೆದ ಅಕ್ಷರ
ನಿನ್ನ ಪುದರ್ ಅಚ್ಚಾಂಡ್
ಓ ಎನ್ನ ಬಂಗಾರ
ಓ ಎನ್ನ ಬಂಗಾರ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಚಿಮ್ಮಿತು ಪ್ರೀತಿಯ ಚಿಲುಮೆ

ಚಿಮ್ಮಿತು ಪ್ರೀತಿಯ ಚಿಲುಮೆ ಕಂಡಾಗ ನಿನ್ನನು
ತುಟಿಯಲ್ಲಿ ನಿನ್ನ ಅಂದು ಕಂಡಾಗ ನಗುವನು
ಎಷ್ಟೊಂದು ಮಧುರ ಕಳೆದೊಂದು ದಿನವದು
ಕಂಗಳ ನೋಟ ಬೆರೆತಂತ ಕ್ಷಣವದು

ಪ್ರೀತಿಯ ಗುಲಾಬಿ ಕೊಟ್ಟಾಗ ನಿನ್ನ ಕೈಗೆ
ನಾಚಿ ನೀರಾದೆ ಕೆಂಪುಗೆನ್ನೆಯ ಸೊಬಗೆ
ನನ್ನ ಕೈಯಲ್ಲಿ ನೀ ಕೈ ಜೋಡಿಸಿದಾಗ
ಜೋಡಿ ಹಕ್ಕಿಗಳಂತೆ ಮನ ಹಾರಿತಾಗ

ಹೀರಿದಾಗ ಜೊತೆಯಾಗಿ ಹಣ್ಣಿನ ರಸವನು
ಕರಗಳಲಿ ರೋಮವು ಜುಮ್ಮೆಂದ ಕ್ಷಣವನು
ಮರೆಯಲಾರೆ ಎಂದಿಗೂ ಮೊದಲ ಭೇಟಿಯನು
ಕಳೆಯೋಣ ಪ್ರತಿಕ್ಷಣ ಸವಿಯುತ್ತಾ ಬಾಳರಸವನು

ರಚನೆ: ಶಶಿಕುಮಾರ್ ವಿ. ಕುಲಾಲ್ 

Wednesday, June 26, 2013

ಹಾಡೋಣ ಬಾ ಗೆಳತಿ

ಹಾಡೋಣ ಬಾ ಗೆಳತಿ ಪ್ರಣಯರಾಗ
ಕುಣಿಯೋಣ ಹೃದಯದೊಡತಿ ಸೇರಿ ಈಗ
ಪ್ರೀತಿಯ ಮತ್ತನ್ನು ಉಣಿಸಿದೆ ನೀನು
ಒಲವೆ ನೀನು ಬಾರೆ..... ಚೆಲುವೆ ನೀನು ಬಾರೆ

ಬಾಳ ಸರಿಗಮದಿ ನೀ ರಾಗವಾದೆ
ನನ್ನ ಉಸಿರ ಉಸಿರಲ್ಲಿ ನೀ ಐಕ್ಯವಾದೆ
ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ ನಿನ್ನ
ಪ್ರೀತಿ ನೀನು ಬಾರೆ ....... ಮನಸ ನೀಡು ಬಾರೆ

ಬೆಳದಿಂಗಳಾಗಿ ನೀ ತೋರಿದೆ ಬೆಳಕ
ನೀ ಸನಿಹ ಬರುತಿರಲು ಮೈಯೆಲ್ಲ ಪುಳಕ
ಬಾಳೋಣ ಜೊತೆಯಾಗಿ ನಾವು
ಕನಸ ನೀಡು ಬಾರೆ ..... ನನಸ ಮಾಡೋಣ ಬಾರೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

ಏನಾಗಿದಿಂದು ಎನಗೆ

ಏನಾಗಿದಿಂದು ಎನಗೆ ಈ ಕಂಪನ
ತವಕವು ಸೇರಲು ನನ್ನ ಮನಸಿನ
ಪ್ರೀತಿಯ ಭಾಷೆಯಲಿ ಏನೆನ್ನಲಿ
ಮೈಜುಮ್ಮೆನ್ನಲು ನಿನ್ನ ಮಾತಿನಲಿ

ನಿನ್ನ ಸ್ವರವ ಕೇಳುತಿರೆ ಚೈತನ್ಯ ಹುಟ್ಟಿದೆ
ಮನವೆಂಬ ಹಕ್ಕಿ ಆಕಾಶದಿ ಹಾರಿದೆ
ತುಂಬಿದೆ ಉಲ್ಲಾಸ ನನ್ನ ಬಾಳಿನಲ್ಲಿ
ಚಡಪಡಿಸಿದೆ ಈ ಒಡಲು ಸೇರಲು ನಿನ್ನಲ್ಲಿ

ಪ್ರೀತಿಯ ನಗುವನ್ನು ಕೇಳುತಿರೆ ಆನಂದ
ನಿನಗಾಗಿ ತೆರೆದಿಡುವೆ ಕದವನ್ನು ಹೃದಯದ
ನದಿಯೊಂದು ಹರಿಯುತ್ತಾ ಸೇರಿದಂತೆ ಸಾಗರವ
ಒಲವಿಂದ ಬಂದು ಸೇರು ನನ್ನ ಜೀವನವ

ರಚನೆ: ಶಶಿಕುಮಾರ್ ವಿ. ಕುಲಾಲ್ 

Tuesday, June 25, 2013

ನೋಡುತಿರೆ ನಿನ್ನ ನಡುವ

ನೋಡುತಿರೆ ನಿನ್ನ ನಡುವ ಬಳುಕುವ ಬಳ್ಳಿಯಂತೆ
ನಡೆಯುತಿರೆ ಮೆಲ್ಲನೆ ಅಪ್ಸರೆಯ ನಾಟ್ಯದಂತೆ
ಸವರಿದಾಗ ಅದರಲಿ ಸುತ್ತಲು ಬೆರಳನು
ನಾಚಿ ನೀರಾಗಿ ಅಪ್ಪಿದೆ ನನ್ನನು

ಹರಿಯುತಿಹ ನದಿಯಂತೆ ಬಳುಕುತಿಹ ನಿನ್ನ ನಡುವು
ನವಿಲಿನ ನಾಟ್ಯದಂತೆ ಕುಣಿವಾಗ ನಿನ್ನ ನಡುವು
ಮರುಳಾದೆನೆ ನಿನ್ನ ತಿರುಗುವ ನಡುವಿನ ಬಿನ್ನಾನಕೆ
ಬಾ ಸನಿಹಕೆ ನಿನ್ನ ಕೊಂಡೊಯ್ಯುವೆ ಸ್ವರ್ಗದ ಲೋಕಕೆ

ಮರುಳಾಗದವರಿಲ್ಲ ಹೆಣ್ಣಿನ ಸೊಂಟಕೆ
ಸೆಳೆಯಿತಲ್ಲೆ ನನ್ನ ಮನ ನಿನ್ನ ಸಣ್ಣ ಸೊಂಟಕೆ
ಹಿಡಿದು ಬರಸೆಳೆಯಲು ನಿನ್ನ ಹಿಡಿದು
ವ್ಯಕ್ತ ಪಡಿಸಲಾಗದ ಸಂತಸ ಕಂಡೆನಿಂದು

ರಚನೆ: ಶಶಿಕುಮಾರ್ ವಿ. ಕುಲಾಲ್ 

Monday, June 24, 2013

ಜಾರಿ ಬಿದ್ದೆನು

ಜಾರಿ ಬಿದ್ದೆನು ನಿನ್ನ ಕಣ್ಣ ನೋಡುತಾ
ಮರಳಿ ಎದ್ದೆನು ನಿನ್ನ ಬಾಹು ಹಿಡಿಯುತಾ
ಮನಸೂರೆಗೊಳ್ಳುವ ನೋಟ ನಿನ್ನ ಕಣ್ಣಲಿ
ಮದವೇರಿ ನಾ ಬಿದ್ದೆ ಅದರ ನಶೆಯಲಿ

ಅಪ್ಪಿಕೊಂಡೆಯಾ ನನ್ನ ಪ್ರೀತಿಯಿಂದಲೆ
ನಿನ್ನವನಾದೆ ನಾ ಆ ಕ್ಷಣದಿಂದಲೆ
ನಾಚಿ ಮುದುಡಿದೆ ನೀ ನನ್ನ ತೋಳತಕ್ಕೆಯಲಿ
ಪ್ರೀತಿ ಪುಟಿಯಿತು ನಿನ್ನ ಎದೆಯಾಳದಲಿ

ಉಸಿರು ಬೆರೆತ ಆ ಕ್ಷಣವನು
ಮನಸೆರಡು ಸೇರಿದ ಆ ದಿನವನು
ಮರೆಯಲಾರೆನು ಎಂದಿಗೂ
ಇರಲಿ ನಮ್ಮ ಈ ಬಂಧ ಎಂದೆಂದಿಗೂ

ರಚನೆ: ಶಶಿಕುಮಾರ್ ವಿ. ಕುಲಾಲ್